ಬಸವನ ಬಾಗೇವಾಡಿಯಲ್ಲಿ ಗೌರಿಶಂಕರ ದೇವಸ್ಥಾನದ ಅದ್ಧೂರಿ ಜಾತ್ರೆ - ಬಸವನ ಬಾಗೇವಾಡಿ ಪಟ್ಟಣ
🎬 Watch Now: Feature Video
Published : Dec 28, 2023, 9:06 AM IST
ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಗೌರಿ ಶಂಕರ ದೇವಸ್ಥಾನದ ಜಾತ್ರೆಯು ಬುಧವಾರ ಅದ್ಧೂರಿಯಿಂದ ಜರುಗಿತು. ಈ ವರ್ಷದ ಜಾತ್ರೆಯು ಆಕರ್ಷಣೀಯವಾಗಿ ವಿಶೇಷ ಕಾರ್ಯಕ್ರಮಗಳೊಂದಿಗೆ ನಡೆಯಿತು. ಜಾತ್ರೆಗೂ ಮುನ್ನ 10 ದಿನಗಳವರೆಗೆ ಪ್ರವಚನ ನಡೆದಿದ್ದು, ಪ್ರತಿದಿನವೂ ಪ್ರವಚನದ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗೌರಿ ಜಾತ್ರೆ ಅಂಗವಾಗಿ ದ್ಯಾಮವ್ವನ ಸೋಗಿನ ಮೆರವಣಿಗೆ ಪಟ್ಟಣದಲ್ಲಿನ ಅಗಸಿ ಹತ್ತಿರದ ಹನುಮಂತ ದೇವರ ಗುಡಿಯಿಂದ ಗೌರಿ ಗುಡಿಯವರೆಗೆ ಅದ್ಧೂರಿಯಾಗಿ ನಡೆಯಿತು. ಸ್ಥಳೀಯರಾದ ಹನುಮಂತ ಕಾಮನಕೇರಿ ಅವರು ದ್ಯಾಮವ್ವನ ಸೋಗು ಹಾಕಿದ್ದರು. ಮೆರವಣಿಗೆಯಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಹಲಿಗೆ ಮಜಲು ಮುಂತಾದ ಕಲಾ ತಂಡಗಳು ಭಾಗವಹಿಸಿ ಜಾತ್ರೆಗೆ ಆಗಮಿಸಿದ ಜನತೆಯ ಗಮನ ಸೆಳೆದವು. ಬಸವನ ಬಾಗೇವಾಡಿ ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮ ಮತ್ತು ಪಟ್ಟಣಗಳಿಂದ ಆಗಮಿಸಿದ್ದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪಟ್ಟಣದಲ್ಲಿನ ಈ ಗೌರಿಶಂಕರ ದೇವಸ್ಥಾನವು 192 ವರ್ಷಗಳ ಇತಿಹಾಸ ಹೊಂದಿದೆ.
ಇದನ್ನೂ ಓದಿ : ಬ್ರಿಟೀಷರ ಕ್ರೌರ್ಯ, ದಬ್ಬಾಳಿಕೆಯ ವಿರುದ್ಧ ಆಕ್ರೋಶ : 'ಹಾಲಕ್ಕಿ ಹಗರಣ'ವೆಂಬ ವಿಶೇಷ ಆಚರಣೆ!