ಹೊನ್ನಾವರದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರ - Gas tanker overturned
🎬 Watch Now: Feature Video
ಉತ್ತರಕನ್ನಡ: ಹೊನ್ನಾವರ ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು. ಅನಿಲ ಸೋರಿಕೆಯಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿದರು. ಭಟ್ಕಳ ಮಾರ್ಗದಿಂದ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದ್ದು ಹೊನ್ನಾವರ ಪಟ್ಟಣದ ಒಳಭಾಗದಿಂದ ಕುಮಟಾ, ಕಾರವಾರ, ಶಿರಸಿಗೆ ಕಳುಹಿಸಲಾಗುತ್ತಿದೆ. ಟ್ಯಾಂಕರ್, ಬಸ್ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
Last Updated : Feb 3, 2023, 8:26 PM IST