ಕಲಬುರಗಿಯಲ್ಲಿ 'ಗಂಧದ ಗುಡಿ' ಜಾತ್ರೆ ಶುರು; ಪುನೀತ್ ಅಭಿಮಾನಿಗಳ ಹರ್ಷೋಲ್ಲಾಸ - ಗಂಧದಗುಡಿ ಚಿತ್ರ ಬಿಡುಗಡೆ
🎬 Watch Now: Feature Video
ಪುನೀತ್ ರಾಜ್ಕುಮಾರ್ ಕಣ್ಮರೆಯಾಗಿ ಬರೋಬ್ಬರಿ ಒಂದು ವರ್ಷವಾದರೂ ಅಭಿಮಾನಿಗಳ ಪಾಲಿಗೆ ಪುನೀತ್ ಇನ್ನೂ ಜೀವಂತ ದೇವರಂತೆ ಕಾಣಿಸುತ್ತಿದ್ದಾರೆ. ಕಲಬುರಗಿಯಲ್ಲಿ ಅಭಿಮಾನಿಗಳು ಪುನೀತ್ ಅವರಿಗೆ ದೇವರ ರೂಪ ನೀಡಿ ಸಂಭ್ರಮಿಸುವ ಮೂಲಕ ಗಮನ ಸೆಳೆದಿದ್ದಾರೆ.ನಾಳೆ ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಬಿಡುಗಡೆ ಹಿನ್ನೆಲೆ ಇಂದು ಕಲಬುರಗಿಯಲ್ಲಿ ಗಂಧದ ಗುಡಿ ಜಾತ್ರೆ ಮಾಡಲಾಗ್ತಿದೆ. ಪುನೀತ್ ಅವರ ಭಾವಚಿತ್ರಕ್ಕೆ ಬ್ರಹ್ಮ ವಿಷ್ಣು ಮಹೇಶ್ವರ ರೂಪವ ನೀಡಿ ಭಾವಚಿತ್ರಗಳನ್ನು ಭವ್ಯ ಮೆರವಣಿಗೆ ಮಾಡ್ತಿದ್ದಾರೆ. ಈ ವೇಳೆ ಅಭಿಮಾನಿಗಳು ಪುನೀತ್ ನಟಿಸಿದ ಚಿತ್ರಗಳ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಕನ್ನಡದ ಭಾವುಟಗಳು ರಾರಾಜಿಸುತ್ತಿವೆ. ಮದ್ದು ಸಿಡಿ ಅಕ್ಷರ ಜಾತ್ರೆ ಮಾದರಿಯಲ್ಲಿ ಗಂದಧ ಗುಡಿ ಜಾತ್ರೆ ಮಾಡುತ್ತಿದ್ದಾರೆ.
Last Updated : Feb 3, 2023, 8:30 PM IST