ಬಿಜೆಪಿ ಸಂಸದ ಸ್ಥಾನ ಕಿತ್ತುಕೊಳ್ಳಬಹುದು, ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಸಾಧ್ಯವಿಲ್ಲ: ರಾಹುಲ್​​​

🎬 Watch Now: Feature Video

thumbnail

ವಯನಾಡ್ (ಕೇರಳ): ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಇದೇ ಮೊದಲ ಬಾರಿಗೆ ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡ್‌ಗೆ ಭೇಟಿ ನೀಡಿದರು. ಈ ವೇಳೆ ವಯನಾಡಿನ ಕಲ್ಪೆಟ್ಟಾದಲ್ಲಿ ಬೃಹತ್​ ರೋಡ್​ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸದ ಎಂಬುದು ಒಂದು ಟ್ಯಾಗ್​​ ಅಥವಾ ಒಂದು ಸ್ಥಾನ. ಇದನ್ನು ಮಾತ್ರ ಬಿಜೆಪಿ ನನ್ನಿಂದ ಕಸಿದುಕೊಳ್ಳಬಹುದು. ಆದರೆ ಇದು ನನ್ನನ್ನು ವಯನಾಡಿನ ಜನರನ್ನು ಪ್ರತಿನಿಧಿಸುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇಷ್ಟು ವರ್ಷಗಳ ನಂತರವೂ ಬಿಜೆಪಿಯು ತನ್ನ ಎದುರಾಳಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ತನ್ನ ಎದುರಾಳಿ ಬೆದರುವುದಿಲ್ಲ ಎಂದು ಬಿಜೆಪಿಗೆ  ಅರ್ಥವಾಗುತ್ತಿಲ್ಲ. ನನ್ನ ಮನೆಗೆ ಪೊಲೀಸರನ್ನು ಕಳುಹಿಸುವುದರಿಂದ ಬೆದರುತ್ತೇನೆ ಎಂದು ಭಾವಿಸಿದ್ದಾರೆ. ಬಿಜೆಪಿ ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಸರಿಯಾದ ಮಾರ್ಗದಲ್ಲೇ ನಡೆಯುತ್ತಿದ್ದೇನೆ ಎಂದು ಹೇಳಿದರು. ಕೇರಳವು ನನ್ನನ್ನು ಹೇಗೆ ಅಪ್ಪಿಕೊಂಡಿದೆ ಎಂದರೆ ನನ್ನನ್ನು  ಕುಟುಂಬದವರಂತೆ ಭಾವಿಸಿದ್ದಾರೆ. ಈ ಕಾರಣಕ್ಕಾಗಿಯೇ ವಯನಾಡ್ ನನಗೆ ಮನೆಯಂತೆ ಭಾಸವಾಗುತ್ತಿದೆ ರಾಹುಲ್​ ಗಾಂಧಿ ಹೇಳಿದರು.

ಇನ್ನು, ಕಲ್ಪೆಟ್ಟಾಕ್ಕೆ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಆಗಮಿಸಿದ್ದ ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಯುಡಿಎಫ್ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಇದನ್ನೂ ಓದಿ : 15ನೇ ವಯಸ್ಸಿಗೆ ಪದವಿ ಪಡೆಯಲು ಹೊರಟಿರುವ ಬಾಲಕಿ: ಪ್ರಧಾನಿ ಭೇಟಿಯಾಗಿ ಹೇಳಿದ್ದೇನು ಗೊತ್ತಾ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.