ಪರಿಷ್ಕರಣೆಗೊಂಡ ಪಠ್ಯಗಳಿಂದ ಇಡೀ ಪೀಳಿಗೆ ನಾಶವಾಗುತ್ತದೆ: ಪ್ರೊ.ರವಿವರ್ಮ ಕುಮಾರ್ - protest against Revised syllabus
🎬 Watch Now: Feature Video
ತುಮಕೂರು: ಪಠ್ಯ ಪುಸ್ತಕ ಪರಿಷ್ಕರಣೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕುವೆಂಪು ಹೋರಾಟ ಸಮಿತಿ ವತಿಯಿಂದ ತಿಪಟೂರು ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊಫೆಸರ್ ರವಿವರ್ಮ ಕುಮಾರ್, "ಪರಿಷ್ಕರಣೆಗೊಂಡ ಪಠ್ಯಗಳು ತಂದೆಯಿಲ್ಲದ ಶಿಶುಗಳಿದ್ದಂತೆ. ಪರಿಷ್ಕರಿಸಲು ಸರ್ಕಾರಿ ಆದೇಶವೇ ಇರಲಿಲ್ಲ. ಒಂದೆರಡು ಪಾಠದ ಬಗ್ಗೆ ಪರಿಶೀಲಿಸಿ ವರದಿ ಕೊಡಿ ಅಂತ ಹೇಳಿದ್ದಷ್ಟೇ. ಆದರೆ ಸಮಗ್ರವಾಗಿ ಪರಿಶೀಲಿಸಿ, ಪ್ರಿಂಟ್ ಹಾಕಿಸಿ, ಅದನ್ನು ಯಾರದ್ದೋ ತಲೆಗೆ ಕಟ್ಟಿ ಈಗ ಸರ್ಕಾರ ತನ್ನದೇ ಮಗು ಎಂದು ಹೇಳುತ್ತಿದೆ. ಇದು ಪ್ರಜಾಪ್ರಭುತ್ವದ ಭೀಕರ ಕಗ್ಗೊಲೆ. ಮಕ್ಕಳಿಗೆ ವಿಷವುಣಿಸುವ ಕೆಲಸವಾಗುತ್ತಿದ್ದು, ಇಡೀ ಪೀಳಿಗೆ ನಾಶವಾಗುತ್ತದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
Last Updated : Feb 3, 2023, 8:25 PM IST