ವೈಜಿಕೆ ಕಾಲೇಜಿನಲ್ಲಿ ಜಾನಪದ ಜಾತ್ರೆ:ಹಳ್ಳಿಯ ವೇಷಭೂಷಣದಲ್ಲಿ ಮಿಂಚಿದ ವಿದ್ಯಾರ್ಥಿಗಳು

By

Published : Mar 4, 2023, 7:35 PM IST

thumbnail

ಚಿಕ್ಕೋಡಿ:ವೈಜಿಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಾನಪದ ಜಾತ್ರೆ ನಡೆಯಿತು. ಕಾಲೇಜು ಕ್ಯಾಂಪಸ್​​ದಲ್ಲಿ ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಧೋತಿ ಪಂಚೆಯುಟ್ಟು ಗಮನ ಸೆಳೆದರು. ಕಾಲೇಜಿನ ಜಾನಪದ ಜಾತ್ರೆಯಲ್ಲಿ ಹಳ್ಳಿ ಸಂಸ್ಕೃತಿಯ ಸೊಗಡು ಎದ್ದು ಕಾಣುತ್ತಿತ್ತು. ಅಥಣಿಯ ವೈಜಿಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಹಳ್ಳಿಯ ವೇಷಭೂಷಣ ಧರಿಸಿ,ಜಾನಪದ ಹಾಡು,ವಿವಿಧ ಆಟಗಳನ್ನು ಆಡುವ ಮೂಲಕ ಸಂಭ್ರಮ ಪಟ್ಟರು.

ಈ ಜಾನಪದ ಜಾತ್ರೆ ಸಂಪೂರ್ಣ ಗ್ರಾಮೀಣ ಜನಜೀವನದ ಪ್ರತಿರೂಪವಾಗಿತ್ತು. ಉತ್ತರ ಕರ್ನಾಟಕ ಶೈಲಿಯ ಸಜ್ಜೆ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಮಾದಲಿ, ಮೊಸರು, ವಿವಿಧ ತರಹೇವಾರಿ ಚಟ್ನಿಗಳನ್ನು ವಿದ್ಯಾರ್ಥಿಗಳು ಸಿದ್ದ ಪಡಿಸಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು  ಎಲ್ಲರೂ ನೆಲ ಮೇಲೆ ಕುಳಿತು ಒಟ್ಟಾಗಿ ಊಟ ಸವಿದರು. 

ಎಲ್ಲ ವಿದ್ಯಾರ್ಥಿನಿಯರು ವೇಷಭೂಷಣದಲ್ಲಿ ಮಿಂಚಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ವಿದ್ಯಾರ್ಥಿಗಳು ವೇಷಭೂಷಣದಲ್ಲಿ ಜಾನಪದ ಹಾಡುತ್ತ ಸಾಮೂಹಿಕ ನೃತ್ಯ ಮಾಡಿದರು. ಗ್ರಾಮೀಣ ಭಾಗದ ಜಾನಪದ ಗೀತೆ,ಸಂಸ್ಕೃತಿ ಮರೆಯಾಗುತ್ತಿರುವ ಕಾಲದಲ್ಲಿ ವೈಜಿಕೆ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳು ಜಾನಪದದ ಮಹತ್ವವನ್ನು ಸಾರಿದರು.
ಇದನ್ನೂಓದಿ:ಲೆಹಂಗಾ ಧರಿಸಿ ಡ್ಯಾನ್ಸ್​ ಮಾಡಿದ ಬಾಲಿವುಡ್​ ಕಿಲಾಡಿ.. ಅಮೆರಿಕದ​ ಪ್ರೇಕ್ಷಕರು ಫಿದಾ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.