ಭಾರಿ ಮಳೆ, ಪ್ರವಾಹ ನೀರಿನಲ್ಲೇ ಜನರ ಬದುಕಿನ ಸರ್ಕಸ್!- ವಿಡಿಯೋ ನೋಡಿ - ಉತ್ತರಪ್ರದೇಶದಲ್ಲೂ ಭಾರಿ ಮಳೆ
🎬 Watch Now: Feature Video
ಉತ್ತರಪ್ರದೇಶ : ದೇಶದ ನಾನಾ ಕಡೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಹಲವೆಡೆ ಗ್ರಾಮಗಳು ಜಲಾವೃತಗೊಂಡಿವೆ. ಉತ್ತರಪ್ರದೇಶದಲ್ಲೂ ಗಾಳಿಸಮೇತ ಜೋರು ಮಳೆ ಸುರಿಯುತ್ತಿದ್ದು ಇಲ್ಲಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಜನರು ಅತ್ತಿತ್ತ ಸಂಚರಿಸಲು ಪರದಾಡುವ ಪರಿಸ್ಥಿತಿ ಇದೆ. ರಸ್ತೆಗಳಲ್ಲಿ ನಿಂತ ಸೊಂಟಮಟ್ಟ ನೀರಿನಲ್ಲೇ ಜನ ನಡೆದು ಸಾಗುತ್ತಿದ್ದಾರೆ. ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳು ಪ್ರವಾಹದ ನೀರಿನಲ್ಲಿ ಸಂಚಾರ ನಡೆಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.
ಮೊರಾದಾಬಾದ್ನ ಹಲವು ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಧೇಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಭಾರಿ ಮಳೆ ಬೀಳುತ್ತಿದೆ. ವಿವಿಧ ರಾಜ್ಯಗಳ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿ ಸಂಚಾರಕ್ಕೆ ಅಡೆತಡೆಯಾಗಿದೆ. ಇನ್ನು, ಈಶಾನ್ಯ ರಾಜ್ಯಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪ್ರಾಣಹಾನಿ ವರದಿಯಾಗಿದೆ. ರಾಜಧಾನಿ ದೆಹಲಿಯಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ಭಾನುವಾರ 20 ವರ್ಷಗಳಲ್ಲೇ ದಾಖಲೆಯ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : Watch... ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ.. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ