ವಿಜಯಪುರದಲ್ಲಿ ಮೊದಲ ಬಾರಿಗೆ ದ್ರಾಕ್ಷಿ ಪ್ರದರ್ಶನ, ಮಾರಾಟ ಮೇಳ ಆಯೋಜನೆ..
🎬 Watch Now: Feature Video
ವಿಜಯಪುರ: ದ್ರಾಕ್ಷಿ ಬೆಳೆಗೆ ಹೆಸರು ವಾಸಿಯಾಗಿರುವ ಗುಮ್ಮಟನಗರಿ ವಿಜಯಪುರದಲ್ಲಿ ಇದೇ ಮೊದಲ ಬಾರಿ ವಿವಿಧ ಮಾದರಿಯ ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ. ಫೆ.16 ರಿಂದ 20 ರವರೆಗೆ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದ ಬಸವವನದಲ್ಲಿ ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳ -2023 ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಎಸ್. ಎಂ.ಬರಗಿಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.18ರಂದು ಮಹಾಶಿವರಾತ್ರಿ ಇರುವ ಕಾರಣ ಶಿವಗಿರಿಗೆ ವಿವಿಧ ಜಿಲ್ಲೆಯ ಭಕ್ತರು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ, ಶಿವರಾತ್ರಿ ಆಚರಣೆ ಮಾಡಲು ಅನುಕೂಲವಾಗುವಂತೆ ದ್ರಾಕ್ಷಿ ಜತೆ ಕಲ್ಲಂಗಡಿ, ಕಜೂರ್, ಗೆಣಸು ಸೇರಿದಂತೆ ಉಪವಾಸವಿರುವ ಭಕ್ತರು ಅಂದು ಸೇವಿಸುವ ಹಣ್ಣುಗಳನ್ನು ಒಂದೇ ಸೂರಿನಡೆ ದೊರೆಯುವಂತೆ ಮಾಡುವುದು ಮತ್ತು ಜಿಲ್ಲೆಯ ದ್ರಾಕ್ಷಿ ಮಾರುಕಟ್ಟೆ ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ ಎಂದರು.