ಹೊಸಕೋಟೆ: ಪ್ರಿಡ್ಜ್, ವಾಷಿಂಗ್ ಮೆಷಿನ್‌ಗಳಿದ್ದ ಉಗ್ರಾಣದಲ್ಲಿ ಬೆಂಕಿ ಅವಘಡ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹೊಸಕೋಟೆ: ಸೆಕೆಂಡ್ ಹ್ಯಾಂಡ್ ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್ ಇದ್ದ ಗೋಡಾನ್ಗೆ ಬೆಂಕಿ ಬಿದ್ದಿರುವ ಘಟನೆ ಹೊಸಕೋಟೆ ಹೊರವಲಯ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಸಮೀಪ ನಡೆದಿದೆ. ಮಾಲೀಕ ಮಧ್ಯಾಹ್ನ ಮಸೀದಿಗೆ ತೆರಳಿದ್ದಾಗ ಅವಘಡ ಸಂಭವಿಸಿದ್ದು ಗೋಡಾನ್ ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಎರಡು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Last Updated : Feb 3, 2023, 8:36 PM IST