ಅಪ್ಪನ ಕೈಯಿಂದಲೇ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಚಾರ್ಜ್ ಪಡೆದ ಮಗಳು!: ಮಂಡ್ಯದಲ್ಲಿ ಭಾವುಕ ಕ್ಷಣ- ವಿಡಿಯೋ - ಮಗಳ ಸಾಧನೆಗೆ ತಂದೆ ಭಾವುಕ
🎬 Watch Now: Feature Video
ಮಂಡ್ಯ: ತಂದೆಯ ವೃತ್ತಿಯನ್ನೇ ಮಗಳು ಅನುಸರಿಸಿದ ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಯಿತು. ಇದೇ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಬಿ.ಎಸ್. ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ಈವರೆಗೆ ಇವರು ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಅವರ ಪುತ್ರಿ ಬಿ.ವಿ. ವರ್ಷಾ ನೇಮಕಗೊಂಡಿದ್ದಾರೆ. ಪಿಎಸ್‌ಐ ಆಗಿದ್ದ ತಂದೆ ತಾವು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್ ಅನ್ನು ಮಗಳಿಗೆ ಹಸ್ತಾಂತರಿಸಿದರು.
ಅರ್ಥಶಾಸ್ತ್ರದಲ್ಲಿ ಎಂಎ ಪದವೀಧರೆಯಾಗಿರುವ ವರ್ಷಾ, 2022ರ ಬ್ಯಾಚ್ನಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರು. ಕಲಬುರಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಇದೀಗ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಅದೃಷ್ಟವೆಂಬಂತೆ ತಂದೆ ಕಾರ್ಯ ನಿರ್ವಹಿಸುತ್ತಿದ್ದ ಠಾಣೆಯ, ಅದೇ ಹುದ್ದೆಗೆ ಮಗಳಿಗೆ ಮೊದಲ ಪೋಸ್ಟಿಂಗ್ ಸಿಕ್ಕಿದೆ!.
ಸೆಂಟ್ರಲ್ ಪೊಲೀಸ್ ಠಾಣೆಗೆ ಆಗಮಿಸಿದ ವರ್ಷಾ ತಮ್ಮ ತಂದೆಯಿಂದಲೇ ಪಿಎಸ್‌ಐ ಚಾರ್ಜ್ ಪಡೆದು ವೃತ್ತಿ ಜೀವನ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ತಂದೆ- ಮಗಳು ಇಬ್ಬರೂ ಭಾವುಕರಾದರು. ನನ್ನ ಸಾಧನೆಗೆ ತಂದೆಯೇ ಸ್ಫೂರ್ತಿ ಎಂದು ವರ್ಷಾ ಹೆಮ್ಮೆಯಿಂದ ಹೇಳಿಕೊಂಡರು.
ಇದನ್ನೂ ನೋಡಿ: ಸಿಎ ಬಿಟ್ಟು ಕೃಷಿಗಿಳಿದ ವಿದ್ಯಾರ್ಥಿನಿ: ಮೆಣಸಿನಕಾಯಿ ಬೆಳೆದು 6 ತಿಂಗಳಲ್ಲಿ 8 ಲಕ್ಷ ಆದಾಯ