G20 Summit: ಜಿ-20 ಶೃಂಗಸಭೆ ವಿರೋಧಿಸಿ ರೈತರ ಪ್ರತಿಭಟನೆ.. ಪ್ರಧಾನಿ ಪ್ರತಿಕೃತಿ ದಹನ - ETV Bharath Karnataka
🎬 Watch Now: Feature Video
Published : Sep 8, 2023, 7:45 PM IST
ಅಮೃತಸರ (ಪಂಜಾಬ್): ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ನ 13 ವಿವಿಧ ಜಿಲ್ಲೆಗಳಲ್ಲಿ ಇಂದು ಜಿ -20 ಶೃಂಗಸಭೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಜಾಗತೀಕರಣ ಮತ್ತು ಕೈಗಾರಿಕೀಕರಣದ ಹೆಸರಿನಲ್ಲಿ ಸಾಮಾನ್ಯ ಜನರ ಹಕ್ಕುಗಳನ್ನು ಉಲ್ಲಂಘಿಸಿ ಕೆಲವೇ ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಎಲ್ಲವೂ ಸುಲಭವಾಗಿ ಸಿಗುವಂತೆ ನೀತಿಗಳನ್ನು ರೂಪಿಸಲಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಆರಂಭವಾಗಲಿರುವ ಜಿ-20 ಶೃಂಗಸಭೆಗೆ ರೈತ ಮುಖಂಡರು ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿ-20 ಸಭೆ ವಿರೋಧಿಸಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಗೋಲ್ಡ್ ಗೇಟ್‌ನಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿದರು.
ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ವಿದೇಶಿ ದೇಶಗಳು ಈಗಾಗಲೇ ತಮ್ಮ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವ ಮೂಲಕ ಜನರನ್ನು ಗುಲಾಮರನ್ನಾಗಿ ಮಾಡಿದ್ದಾರೆ, ಆದರೆ, ಅವರು ಪಂಜಾಬ್‌ನಲ್ಲಿ ಇದನ್ನು ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ರಾಜಧಾನಿಗೆ ಗಣ್ಯರ ಆಗಮನ: ನಾಳೆಯಿಂದ ನಡೆಯಲಿರುವ ಜಿ-20 ಸಭೆಗೆ ಜಾಗತಿಕ ಮಟ್ಟದ ನಾಯಕರು ರಾಜಧಾನಿಗೆ ಬಂದಿಳಿದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಗಣ್ಯರು ಆಗಮಿಸಿದ್ದಾರೆ.
ಇದನ್ನೂ ಓದಿ: G-20 Summit: ದೆಹಲಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮನ