ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ: ರೈತ ಸಾವು..
🎬 Watch Now: Feature Video
ವಯನಾಡ್(ಕೇರಳ): ಹುಲಿ ದಾಳಿಗೆ ರೈತರೊಬ್ಬರು ಮೃತ ಪಟ್ಟಿರುವ ಘಟನೆ ಮಾನಂಥವಾಡಿಯಲ್ಲಿ ಇಂದು ನಡೆದಿದೆ. ಥಾಮಸ್ ಅಲಿಯಾಸ್ ಸಲು (50) ಮೃತ ವ್ಯಕ್ತಿ. ಸಲು ಪುತ್ತುಸ್ಸೆರಿಯ ಪಲ್ಲಿಪುರಂ ನಿವಾಸಿಯಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಅವರ ಮೇಲೆ ಹುಲಿ ದಾಳಿ ನಡೆಸಿದೆ. ಘಟನೆ ಬಳಿಕ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ಶಾಲೆಗೆ ಹೋಗುವ ಮಕ್ಕಳ್ಳಿದ್ದು ಅವರ ಸುರಕ್ಷತೆ ಬಗ್ಗೆ ಇಲಾಖೆ ಖಾಳಜಿ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇನ್ನು ರೈತನ ಮೇಲೆ ದಾಳಿ ನಡೆಸಿದ ಹುಲಿ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ನಂಜನಗೂಡು: ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ