ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಹರಕೆ ತೀರಿಸಿದ ಅಭಿಮಾನಿ: ವಿಡಿಯೋ - ಸಿದ್ದು ಅಭಿಮಾನಿ
🎬 Watch Now: Feature Video
ಮೈಸೂರು: ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದ ಸಿದ್ದು ಅಭಿಮಾನಿ, ಸಿಎಂ ಮನೆದೇವರು ಸಿದ್ದರಾಮೇಶ್ವರನಿಗೆ ಚಿನ್ನ ಲೇಪಿತ ಬೆಳ್ಳಿ ನಾಗಾಭರಣವನ್ನು ನೀಡಿ ಹರಕೆ ತೀರಿಸಿದ್ದಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು, ವರುಣಾ ವಿಧಾನಸಭಾ ಕ್ಷೇತ್ರದ ದೇವೇಗೌಡನಹುಂಡಿಯ ಮಹದೇವ ಎಂಬುವರ ಮಗ ರವಿ ಅವರು, ಸಿದ್ದರಾಮನ ಹುಂಡಿಯಲ್ಲಿರುವ ಸಿದ್ದರಾಮಯ್ಯನವರ ಮನೆದೇವರು ಸಿದ್ದರಾಮೇಶ್ವರನಿಗೆ ಹರಕೆ ಹೊತ್ತಿದ್ದರು. ಮತ್ತೆ ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಕ್ಕೆ, ಅನಿವಾಸಿ ಭಾರತೀಯರಾದ ರವಿ ಚಿನ್ನ ಲೇಪಿತ ಬೆಳ್ಳಿಯ ನಾಗಾಭರಣವನ್ನು ನೀಡಿ ತಮ್ಮ ಹರಕೆ ತೀರಿಸಿದ್ದಾರೆ.
ರವಿ ವರುಣಾ ವಿಧಾನಸಭಾ ಕ್ಷೇತ್ರದ ದೇವೇಗೌಡನಹುಂಡಿಯ ನಿವಾಸಿಯಾಗಿದ್ದು, ಇವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಗರೋತ್ತರ ಕನ್ನಡಿಗರ ಸೇವಾ ಸಂಸ್ಥೆಯ ಸಂಸ್ಥಾಪಕ ಹಾಗೂ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ. ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಕೂಡ ಆಗಿದ್ದಾರೆ. ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಇರುವ ಸಿದ್ದರಾಮೇಶ್ವರ ದೇವರಿಗೆ, ಈ ಸ್ವರ್ಣ ಲೇಪಿತ ಬೆಳ್ಳಿಯ ನಾಗಾಭರಣ ನೀಡುವ ಸಂದರ್ಭದಲ್ಲಿ, ಸಿದ್ದರಾಮಯ್ಯನವರ ಸೋದರ ಸಿದ್ದೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಇದನ್ನೂ ನೋಡಿ: ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ: ಸಿಎಂ ಸಿದ್ದರಾಮಯ್ಯ ಭವಿಷ್ಯ