Watch: ಬೀದರ್ ಉತ್ಸವದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ
🎬 Watch Now: Feature Video
ಬೀದರ್ ಉತ್ಸವ ಪ್ರಯುಕ್ತ ಐತಿಹಾಸಿಕ ಕೋಟೆ ಆವರಣದಲ್ಲಿ ಮೂರು ದಿನ ನಡೆದ ಫಲಪುಷ್ಪ ಪ್ರದರ್ಶನ ಬೆಂಗಳೂರಿನ ಲಾಲ್‍ಬಾಗ್ ಮಾದರಿಯಲ್ಲಿ ಗಮನ ಸೆಳೆಯಿತು. ಗ್ಲಾಡಿಯೋಸ್, ಕ್ರಿಶ್ಚಂತಮನ್, ಕಾರ್ನೇಶನ್, ಅಂಥೋರಿಯಂ, ಡಚ್ ರೋಸೆಸ್, ಜರ್ಬೆರಾ ಸೇರಿ ಹಲವು ಹೂವುಗಳಿಂದ ಹೈದರಾಬಾದ್ ಮತ್ತು ಬೆಂಗಳೂರಿನ ಕಲಾವಿದರು ಕಲಾಕೃತಿಗಳನ್ನು ಸಿದ್ಧಪಡಿಸಿದ್ದು, ಪರಿಸರ ಪ್ರೇಮಿಗಳನ್ನು ಮನಸೂರೆಗೊಳ್ಳುವಂತೆ ಮಾಡಿದೆ. ಉತ್ಸವದಲ್ಲಿ ಮೊದಲ ಬಾರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪ್ರದರ್ಶನ ಆಯೋಜನೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಥರ್ಮಕೂಲ್‍ನಿಂದ 12 ಅಡಿ ಎತ್ತರದ ಬಸವೇಶ್ವರರ ಸುಂದರ ಪ್ರತಿಮೆ ಸಿದ್ಧಪಡಿಸಿ ಹೂವುಗಳಿಂದ ಅಲಂಕೃತ ಮಾಡಲಾಗಿದೆ. ಹಾಗೂ ಇತ್ತೀಚಿಗೆ ಶಿವೈಕ್ಯರಾಗಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಹೂಗಳಿಂದ ಅಲಂಕಾರ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಇನ್ನೂ ಮಳೆ ನೀರು ಕೊಯ್ಲು, ಕೃಷಿ ಹೊಂಡ, ನೀರಿನ ಸದ್ಬಳಕೆ, ಹನಿ ನೀರಾವರಿಯ ಮಾದರಿಗಳು ಜನರ ಗಮನ ಸೆಳೆಯುದವು. ಹಾಗೂ ಕೃಷಿಗೆ ಸಂಬಂಧಿಸಿದ ಕುರಿತ ಮಾಹಿತಿ ಒದಗಿಸಲಾಗುತ್ತಿದೆ. ರಜಾ ದಿನವಾದ ಭಾನುವಾರವೇ ಅತ್ಯಧಿಕ ಜನ ಆಗಮಿಸಿದ್ದು, ಮೂರು ದಿನಗಳ ಉತ್ಸವಕ್ಕೆ ಸುಮಾರು ಐದು ಲಕ್ಷ ಜನ ಭಾಗವಹಿಸುವ ಅಂದಾಜಿದೆ.
Last Updated : Feb 3, 2023, 8:38 PM IST