ಪಾಲಕ್ಕಾಡ್​ ಸ್ಟೀಲ್​ ಫ್ಯಾಕ್ಟರಿಯಲ್ಲಿ ಸ್ಟೋಟ :ಒಬ್ಬನ ಸಾವು, ಮೂವರಿಗೆ ಗಾಯ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Jun 20, 2023, 11:17 AM IST

ಪಾಲಕ್ಕಾಡ್​ (ಕೇರಳ): ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿರುವ ಕೈರಾಲಿ ಸ್ಟೀಲ್​ ಫ್ಯಾಕ್ಟರಿಯಲ್ಲಿ ಸ್ಟೋಟ ಸಂಭವಿಸಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪತ್ತನಂತಿಟ್ಟ ಮೂಲದ ಅರವಿಂದನ್ ಮೃತ ಕಾರ್ಮಿಕ.

ಘಟನೆಯ ವಿವರ: ಇಂದು ಬೆಳಗ್ಗೆ 5:30 ಸುಮಾರಿಗೆ ಕೆಲಸದ ವೇಳೆ ಕಾರ್ಖಾನೆಯಲ್ಲಿ ಕುಲುಮೆ (ಶಾಖದ ಚಿಮಣಿ) ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸ್ಫೋಟದ ನಂತರ ಕಾರ್ಖಾನೆಯಲ್ಲಿ ಬೆಂಕಿ  ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯ ಕಾರ್ಮಿಕರು ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ವೇಳೆ, ಘಟನೆಯಲ್ಲಿ ಗಾಯಗೊಂಡವರನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅರವಿಂದನ ಅವರ ದೇಹ ಭಾಗಶಃ ಸುಟ್ಟು ಕರಕಲಾಗಿದ್ದ ಹಿನ್ನಲೆ ಅವರು ಸ್ಥಳದಲ್ಲೇ ಸಾವನ್ನಪ್ಪಿದಾರೆ. ಘಟನೆ ಸಂಭವಿಸಿದ ಕಾರ್ಖಾನೆಯಲ್ಲಿ ಒಟ್ಟು 100 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 

ಮೊಬೈಲ್​ ಸ್ಪೋಟಗೊಂಡು ಬಾಲಕಿ ಸಾವು: ಕೆಲ ದಿನಗಳ ಹಿಂದೆ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಮೊಬೈಲ್ ಫೋನ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ತಿರುವಿಲ್ವಾಮಲದಲ್ಲಿ ಎಂಬಲ್ಲಿ ಘಟನೆ ಸಂಭವಿಸಿತ್ತು. ರಾತ್ರಿ 10.30ರ ಸುಮಾರಿಗೆ ಮನೆಯಲ್ಲಿ ಮೊಬೈಲ್​ನಲ್ಲಿ ಬಾಲಕಿ ವಿಡಿಯೋ ವೀಕ್ಷಿಸುತ್ತಿದ್ದಳು. ಈ ವೇಳೆ ಮೊಬೈಲ್​ ಸ್ಫೋಟಗೊಂಡು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.