ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17236638-thumbnail-3x2-yyy.jpg)
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಲೆನಾಡಿನ ಬೆನ್ನಲ್ಲೆ ಬಯಲುಸೀಮೆಯಲ್ಲೂ ಕಾಡಾನೆ ಹಿಂಡು ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಕಳೆದ ಮೂರು ದಿನಗಳಿಂದ ಕಾಡಾನೆ ಹಿಂಡೊಂದು ತರೀಕೆರೆ ತಾಲೂಕಿನ ಬೈರಾಪುರ, ನಂದಿಬಟ್ಲು, ಮಲ್ಲಿಗೆನಹಳ್ಳಿ, ಲಿಂಗದಹಳ್ಳಿ ಸುತ್ತಮುತ್ತ ಸಂಚಾರ ನಡೆಸುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಮತ್ತು ರೈತರು ಕಂಗಾಲಾಗಿದ್ದಾರೆ. ಇನ್ನು ಉಡೇವಾ ಗ್ರಾಮದ ಸಮೀಪ ಬೀಡು ಬಿಟ್ಟಿರೋ ಕಾಡಾನೆ ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಪಟಾಕಿ ಸಿಡಿಸಿ ಬೆದರಿಸಿದಾಗ ಕಾಡಿಗೆ ಹೋಗುವ ಆನೆಗಳು, ಮತ್ತೆ ಸಂಜೆಯಾಗುತ್ತಿದ್ದಂತೆ ಜಮೀನಿನಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ.
Last Updated : Feb 3, 2023, 8:36 PM IST