ಚಾಮರಾಜನಗರ: ಆಸನೂರು ಸಮೀಪ ಬಸ್ ಬೆನ್ನಟ್ಟಿ ಗಾಜು ಒಡೆದು ಹಾಕಿದ ಸಲಗ - ಗಾಜು ಒಡೆದು ಹಾಕಿದ ಸಲಗ
🎬 Watch Now: Feature Video

ಚಾಮರಾಜನಗರ: ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಅಸನೂರು ಹತ್ತಿರದ ಗೇರೆಮಾಲ ಬಳಿ ನಡೆದಿದೆ. ಸತ್ಯಮಂಗಲಂಗೆ ತೆರಳುತ್ತಿದ್ದ ಬಸ್ನ ಎದುರು ಏಕಾಏಕಿ ಪ್ರತ್ಯಕ್ಷಗೊಂಡ ಆನೆಯೊಂದು ಬಸ್ ಹಿಮ್ಮೆಟ್ಟಿಸುತ್ತ ಬಂದು ಗಾಜು ಒಡೆದು ಹಾಕಿದೆ. ಆನೆ ದಾಳಿಯಿಂದ ಕಂಗೆಟ್ಟ ಪ್ರಯಾಣಿಕರು ಕಿರುಚಾಡಿದ್ದು ಬಳಿಕ ಆನೆ ಕಾಡಿನತ್ತ ತೆರಳಿದೆ. ಈ ಘಟನೆ ಬುಧವಾರ ನಡೆದಿದೆ ಎಂದು ತಿಳಿದು ಬಂದಿದೆ.
Last Updated : Feb 3, 2023, 8:38 PM IST