ಕಾಡಂಚಿನ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದ ಕಾಡಾನೆ ಸೆರೆ- ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಚಾಮರಾಜನಗರ: ಕಾಡಂಚಿನ ಗ್ರಾಮಗಳಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡಿ ರೈತರ ನಿದ್ರೆಗೆಡಿಸಿದ್ದ ಪುಂಡಾನೆಯನ್ನು ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಬಿದಿರು ತಿನ್ನುತ್ತಿದ್ದ ಪುಂಡಾನೆಯನ್ನು ಜಯಪ್ರಕಾಶ್, ಪಾರ್ಥಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು.
ಕುಂದಕೆರೆ ಅರಣ್ಯ ವಲಯದ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು. ರೋಸಿಹೋದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆ 4 ದಿನಗಳಿಂದ ಸೆರೆ ಕಾರ್ಯಾಚರಣೆ ಕೈಗೊಂಡಿತ್ತು.
ಕೇರಳದಿಂದ ತಮಿಳುನಾಡಿಗೆ ಬಂದಿದ್ದ ಆನೆ: ಕೇರಳದಿಂದ ತಮಿಳುನಾಡಿಗೆ ಬಂದು ಅಟ್ಟಹಾಸ ಮೆರೆದಿದ್ದ ಅರಿಕೊಂಬನ್ ಆನೆಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ಸೆರೆಹಿಡಿದಿದ್ದರು. ಕೇರಳ ರಾಜ್ಯದ ಮುನ್ನಾರ್ ಪ್ರದೇಶದಲ್ಲಿ ಆನೆಯನ್ನು ಕೆಲವು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಕುಮ್ಕಿ ಆನೆಯ ಸಹಾಯದಿಂದ ಸೆರೆ ಹಿಡಿದಿತ್ತು. ಇದೀಗ ಅರಿಕೊಂಬನ್ ಆನೆಗೆ ಅರಿವಳಿಕೆ ನೀಡಿ ನಾಲ್ಕು ಕುಮ್ಕಿ ಆನೆಗಳ ಸಹಾಯದಿಂದ ಪೆರಿಯಾರ್ ಹುಲಿ ಅರಣ್ಯಧಾಮಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ಕೇರಳದಿಂದ ತಮಿಳುನಾಡಿಗೆ ಬಂದು ಅಟ್ಟಹಾಸ ಮೆರೆದಿದ್ದ ಅರಿಕೊಂಬನ್ ಆನೆ ಸೆರೆ