ದಾವಣಗೆರೆಯಲ್ಲಿ ಈದ್ ಮಿಲಾದ್ ಸಂಭ್ರಮದಿಂದ ಆಚರಣೆ - ಹಸಿರು ಧ್ವಜ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/28-09-2023/640-480-19632992-thumbnail-16x9-bgk.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 28, 2023, 10:51 PM IST
ದಾವಣಗೆರೆ: ನಗರದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಣೆ ಮಾಡಿದರು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದಂಗವಾಗಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಬಹಳ ಶ್ರದ್ಧಾಭಕ್ತಿಯಿಂದ ನಗರದಲ್ಲಿ ಆಚರಿಸಿದರು.
ಗುರುವಾರ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಆಝಾದ್ ನಗರದಿಂದ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು. ಮೆಕ್ಕಾ-ಮದೀನಾ ಮಾದರಿ ನಾತ್ಗಳು, ಸಲಾಂಗಳನ್ನು ಹಾಡುತ್ತ ಮುನ್ನಡೆದರು. ಇಸ್ಲಾಂ ಧರ್ಮದ ಹಸಿರು ಧ್ವಜಗಳ ಮಧ್ಯೆ ರಾಷ್ಟ್ರೀಯ ಧ್ವಜಗಳನ್ನು ಮುಸ್ಲಿಂರು ಪ್ರದರ್ಶಿಸಿದರು.
ಈದ್ ಮಿಲಾದ್ ಮೆರವಣಿಗೆ ಆಝಾದ್ ನಗರದಿಂದ ಹೊರಟು ಅಹ್ಮದ್ ನಗರ, ಮದೀನಾ ಆಟೋ ನಿಲ್ದಾಣ ವೃತ್ತ, ಎನ್ ಆರ್ ರಸ್ತೆ, ಕೆಆರ್ ಮಾರುಕಟ್ಟೆ ತಲುಪಿತು. ಇಸ್ಲಾಂ ಪೇಟೆ, ಗಡಿಯಾರ ಕಂಭ ವೃತ್ತ, ವಸಂತ ರಸ್ತೆ, ಅರುಣ್ ಟಾಕೀಸ್ ಬಳಿ ಬಂದು ಪಿಬಿ ರಸ್ತೆ ಸೇರಿತು. ಬಳಿಕ ಗಾಂಧಿ ವೃತ್ತ, ಆಶೋಕ ರಸ್ತೆ, ಮಾಗನಹಳ್ಳಿ ರಸ್ತೆ ಮೂಲಕ ಮಿಲಾದ್ ಮೈದಾನಕ್ಕೆ ಮೆರವಣಿಗೆ ಬಂದು ಕೊನೆಗೊಂಡಿತು. ಆಝಾದ್ ನಗರದಿಂದ ಮೆರವಣಿಗೆ ಆರಂಭವಾಗಿ ಮುಕ್ತಾಯದವರೆಗೂ ಪುಟ್ಟ ಬಾಲಕನೊಬ್ಬನು ರಾಷ್ಟ್ರಧ್ವಜ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಇದನ್ನೂಓದಿ:ಬಳ್ಳಾರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ.. ಮೆಕ್ಕಾ, ಮದೀನಾದ ಸ್ತಬ್ಧಚಿತ್ರ ಮೆರವಣಿಗೆ