ಚಾಮರಾಜನಗರ ದಸರಾಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ - ಚಾಮರಾಜನಗರದಲ್ಲಿ ದಸರಾ
🎬 Watch Now: Feature Video
Published : Oct 20, 2023, 10:22 PM IST
ಚಾಮರಾಜನಗರ: ಚಾಮರಾಜನಗರದಲ್ಲಿ ದಸರಾ ಈ ಬಾರಿ ಮಂಕಾಗಿದ್ದು ಜನರನ್ನು ಸೆಳೆಯವಲ್ಲಿ ವಿವಿಧ ಕಾರ್ಯಕ್ರಮಗಳು ವಿಫಲವಾಗಿದೆ. ಚಾಮರಾಜನಗರ ದಸರಾ ಕಾರ್ಯಕ್ರಮಕ್ಕೆ ಅ. 17 ರಂದು ಚಾಲನೆ ನೀಡಲಾಗಿತ್ತು. ಇಂದು ಕೊನೆ ದಿನವಾಗಿದ್ದು, ಇಷ್ಟೂ ದಿನವೂ ಹಗಲಿನ ಕಾರ್ಯಕ್ರಮಗಳತ್ತ ಜನರ ಸಂಖ್ಯೆ ವಿರಳವಾಗಿತ್ತು. ಜಿಲ್ಲೆಯಲ್ಲಿ ಕೇವಲ ಅ.17ರಿಂದ ಅ.20ರವರೆಗೆ ನಾಲ್ಕು ದಿನ ದಸರಾ ಆಚರಿಸಲಾಗಿದೆ.
ನಾಲ್ಕು ದಿನಗಳ ಕಾಲ ಜಿಲ್ಲೆಯ ಸುಮಾರು 320ಕ್ಕೂ ಹೆಚ್ಚು ಸ್ಥಳೀಯ ಕಲಾವಿದರ ತಂಡ ಬಗೆಬಗೆಯ ಮನರಂಜನೆ ನೀಡಿದರೂ ಜನರು ಮಾತ್ರ ಕಾರ್ಯಕ್ರಮಗಳತ್ತ ಸುಳಿದಿದ್ದು ಮಾತ್ರ ಬೆರಳೆಣಿಕೆಯಷ್ಟೇ. ಮಕ್ಕಳ ದಸರಾ, ಮಹಿಳಾ ದಸರಾ, ರೈತ ದಸರಾ ಸೇರಿದಂತೆ ಹಲವು ಹೆಸರುಗಳಲ್ಲಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಚಾಲನೆ ನೀಡಿದರೂ ಹೆಚ್ಚಿನ ಕಾರ್ಯಕ್ರಮಗಳು ಖಾಲಿ ಕುರ್ಚಿಗಳಿಗಷ್ಟೇ ಸೀಮಿತವಾಯಿತು.
ಗುಂಡ್ಲುಪೇಟೆಯಲ್ಲಿ ಗ್ರಾಮೀಣ ದಸರಾವೇ ರದ್ದು: ಅನುದಾನ ಬಿಡುಗಡೆಯಾಗದ ಹಿನ್ನೆಲೆ ಇಂದು ನಡೆಯಬೇಕಿದ್ದ ಗ್ರಾಮೀಣ ದಸರಾ ರದ್ದುಗೊಂಡಿದೆ. ಇಂದು ಸಂಜೆ 4 ರಿಂದ 10 ರವರೆಗೆ ಪಟ್ಟಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು 10 ಲಕ್ಷ ರೂ. ಅಂದಾಜಿನ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, ಗ್ರಾಮೀಣ ದಸರಾಗೆ ಅನುದಾನ ಕೊಡದ ಹಿನ್ನೆಲೆ ಗ್ರಾಮೀಣ ದಸರಾವೇ ರದ್ದಾಗಿದೆ.
ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಯದುವೀರ್‌ರಿಂದ ಸರಸ್ವತಿ ಪೂಜೆ, ಪಕ್ಕದಲ್ಲಿ ಪುತ್ರ ಆದ್ಯವೀರ್- ವಿಡಿಯೋ ನೋಡಿ