ಮದ್ಯದ ಅಮಲಿನಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ರಾ ಸರ್ಕಾರಿ ವೈದ್ಯ? ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17923693-thumbnail-4x3-yy.jpg)
ತುಮಕೂರು : ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದು ಹೇಳುತ್ತೇವೆ. ವೈದ್ಯರನ್ನು ದೇವರಂತೆ ಕಾಣುತ್ತೇವೆ. ಆದರೆ ಸರ್ಕಾರಿ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಆಸ್ಪತ್ರೆಯಲ್ಲಿ ಮಲಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಜಿಲ್ಲೆಯ ವೈದ್ಯರೊಬ್ಬರು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಟೇಬಲ್ ಮೇಲೆ ಕಾಲಿಟ್ಟು ಕುರ್ಚಿ ಮೇಲೆ ಮಲಗಿರುವುದನ್ನು ಜನರು ವಿಡಿಯೋ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರು ಕರ್ತವ್ಯಕ್ಕೆ ಮದ್ಯ ಸೇವಿಸಿ ಆಗಮಿಸಿದ್ದಲ್ಲೇ, ಆಸ್ಪತ್ರೆಯಲ್ಲೇ ಅಡ್ಡಾದಿಡ್ಡಿಯಾಗಿ ಮಲಗಿದ್ದರು. ಇನ್ನೊಂದಡೆ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದರೂ ಕ್ಯಾರೇ ಎಂದಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ರೋಗಿಗಳ ಸಂಬಂಧಿಕರು ಮೊಬೈಲ್ನಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇನ್ನು, ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹರೀಶ್, ಮಲಗಿದ್ದ ವೈದ್ಯರನ್ನು ಎಚ್ಚರಗೊಳಿಸಿ ಹೊರಗೆ ಕಳುಹಿಸಿದ್ದಾರೆ. ಜೊತೆಗೆ ಕರ್ತವ್ಯ ಪ್ರಜ್ಞೆ ಮರೆತ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಕಾಂಗ್ರೆಸ್, ಕೆಆರ್ಎಸ್ ಕಾರ್ಯಕರ್ತರಿಂದ ಮುತ್ತಿಗೆ