ಬೆಂಗಳೂರು: ಕುಡಿದ ಅಮಲಿನಲ್ಲಿ ಸರಣಿ ಅಪಘಾತವೆಸಗಿದ ಚಾಲಕ! - ಬೆಂಗಳೂರಿನಲ್ಲಿ ಸರಣಿ ಅಪಘಾತ
🎬 Watch Now: Feature Video
ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಟೆಂಪೋ ಟ್ರಾವೆಲರ್ ಚಲಾಯಿಸಿ ಸರಣಿ ಅಪಘಾತವೆಸಗಿರುವ ಘಟನೆ ಮತ್ತಿಕೆರೆಯ ಬಾಂಬೆ ಡೈಯಿಂಗ್ ರಸ್ತೆಯಲ್ಲಿ ನಡೆದಿದೆ. ಅಮಲಿನಲ್ಲಿ ಟೆಂಪೋ ನಿಯಂತ್ರಿಸಲಾಗದೇ ರಸ್ತೆ ಬದಿಯಲ್ಲಿದ್ದ ಬೈಕ್ಗಳು ಮತ್ತು ಕಾರುಗಳಿಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ಬೈಕ್ ಗಳು, ಎರಡು ಕಾರುಗಳು ಜಖಂಗೊಂಡಿವೆ. ಅಪಘಾತವೆಸಗಿದ ಚಾಲಕನನ್ನ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಯಶವಂತಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Last Updated : Feb 3, 2023, 8:25 PM IST