ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ, ಜನರ ಭಾವನೆ ಬಗ್ಗೆ ನಂಬಿಕೆ ಇದೆ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
🎬 Watch Now: Feature Video
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ನಡೆಸುವ ವಿಶ್ವಾಸ ಇದೆ. ಈಗಾಗಲೇ ನಡೆಸಿರುವ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗುರುವಾರ ಸೇವೆಗಳನ್ನು ಸಲ್ಲಿಸಿ ಮಾಧ್ಯಮದವರ ಜೊತೆ ಕೆ.ಎಸ್ ಈಶ್ವರಪ್ಪ ಮಾತನಾಡಿದರು.
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 26, ಬಿಜೆಪಿಗೆ 1 ಸ್ಥಾನ ಎಂದು ಸಮೀಕ್ಷೆ ಬಂದಿತ್ತು. ಆದರೆ, ಫಲಿತಾಂಶ ಬಂದ ಬಳಿಕ ಬಿಜೆಪಿ 25, ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಈ ಸಮೀಕ್ಷೆಗಳ ಬಗ್ಗೆ ನಂಬಿಕೆ ಇಲ್ಲ. ಜನರ ಭಾವನೆ ಬಗ್ಗೆ ನಂಬಿಕೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರಕಾರ ನಡೆಸಲಿದೆ ಎಂದರು. ಬಿಜೆಪಿ ಸರಕಾರ ಬಂದ ಮೇಲೆ ನಿಮಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆಗೆ ಇದರ ಬಗ್ಗೆ ಬಿಜೆಪಿ ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ದ ಎಂದರು.
ಉರುಳು ಸೇವೆ, ಆಶ್ಲೇಷ ಬಲಿ ಸೇವೆ : ಗುರುವಾರ ಮುಂಜಾನೆ ಆದಿಸುಬ್ರಹ್ಮಣ್ಯದಲ್ಲಿ ಈಶ್ವರಪ್ಪ ಕುಟುಂಬದವರು ಉರುಳು ಸೇವೆ ನೆರವೇರಿಸಿದರು. ಬಳಿಕ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ್ದು, ಕುಟುಂಬ ಸಮೇತ ಶ್ರೀ ಸುಬ್ರಹ್ಮಣ್ಯ ದೇವರ ದರುಶನ ಹಾಗೂ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಪತ್ನಿ, ಮಗ ಕಾಂತೇಶ್ ಮತ್ತು ಸೊಸೆ ಹಾಗೂ ಕುಟುಂಬಸ್ಥರು ಜೊತೆಗಿದ್ದರು.
ಇದನ್ನೂ ಓದಿ : ಮೊಮ್ಮಗಳ ಜೊತೆಗೆ ಆಟವಾಡಿ ಖುಷಿಪಟ್ಟ ವೀರಣ್ಣ ಚರಂತಿಮಠ..