ರತ್ನಗಿರಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ಗಳ ಈಜಾಟ: ಡ್ರೋನ್ ಕ್ಯಾಮರಾದಲ್ಲಿ ಸೆರೆ - ಭಾತ್ಯೆ ಸಮುದ್ರದಲ್ಲಿ ಡಾಲ್ಫಿನ್‌ಗಳು ಪತ್ತೆ
🎬 Watch Now: Feature Video
ಮಹಾರಾಷ್ಟ್ರದ ರತ್ನಗಿರಿ ಬಳಿಯ ಭಾತ್ಯೆ ಸಮುದ್ರದಲ್ಲಿ ಡಾಲ್ಫಿನ್‌ಗಳು ಒಟ್ಟಾಗಿ ಕಾಣಿಸಿಕೊಂಡಿವೆ. ಈ ಭಾಗ ಡಾಲ್ಫಿನ್ಗಳಿಗೆ ಸುರಕ್ಷಿತವಲ್ಲ ಎಂಬ ಆಪಾದನೆ ಮಧ್ಯೆಯೇ ಜಲಚರ ಪ್ರಾಣಿಗಳು ಕಡಲ ಕಿನಾರೆಗೆ ಬಂದಿವೆ. ಇಲ್ಲಿನ ಛಾಯಾಗ್ರಾಹಕ ಸುಪ್ರಿಯಾಂತೋ ಖಾವ್ಲೆ ಎಂಬುವರು ಡಾಲ್ಫಿನ್ಗಳ ನೀರಾಟವನ್ನು ಡ್ರೋನ್ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಗುಂಪುಗುಂಪಾಗಿ ಸಾಗುತ್ತಿರುವ ಡಾಲ್ಫಿನ್‌ಗಳು ಪ್ರವಾಸಿಗರನ್ನು ರಂಜಿಸಿವೆ. ರತ್ನಗಿರಿಯ ಭಾಗದಲ್ಲಿ ಡಾಲ್ಫಿನ್‌ಗಳು ಕಾಣಿಸಿಕೊಂಡಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ.
Last Updated : Feb 3, 2023, 8:32 PM IST