ಉತ್ತರ ಪ್ರದೇಶದ ಕಾಲುವೆಯಲ್ಲಿ 2 ಡಾಲ್ಪಿನ್ ಪತ್ತೆ, ರಕ್ಷಣೆ- ವಿಡಿಯೋ - Turtle Survival Alliance Defense Team
🎬 Watch Now: Feature Video
ಬಾರಬಂಕಿ (ಉತ್ತರ ಪ್ರದೇಶ): ಇಲ್ಲಿನ ಶಾರದಾ ಕಾಲುವೆಯೊಂದರಲ್ಲಿ ಶನಿವಾರ ಎರಡು ಡಾಲ್ಫಿನ್ಗಳು ಕಾಣಿಸಿಕೊಂಡಿವೆ. ಮಾಹಿತಿ ಪಡೆದ ತಕ್ಷಣ ಟರ್ಟಲ್ ಸರ್ವೈವಲ್ ಅಲೈಯನ್ಸ್ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ 2 ರ ಪೈಕಿ ಒಂದು ಡಾಲ್ಫಿನ್ ರಕ್ಷಿಸಿತು. ಸುದ್ದಿ ಕೇಳಿ ಊರ ಜನರೆಲ್ಲ ನಾಲೆಯ ಬಳಿ ಜಮಾಯಿಸಿದರು. ಡಿಎಫ್‌ಒ ಡಾಲ್ಫಿನ್ಗಳ ಮೇಲೆ ವಿಶೇಷ ನಿಗಾ ವಹಿಸುವಂತೆ ಆದೇಶಿಸಿದ್ದರು. ಲಕ್ನೋ ಮೂಲದ ಟಿಎಸ್‌ಎ ಘಟಕಕ್ಕೆ ಕೂಡ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ತಂಡ ಸುಮಾರು 6 ಗಂಟೆಗಳ ಪ್ರಯತ್ನದ ಬಳಿಕ ಒಂದು ಡಾಲ್ಫಿನ್ ರಕ್ಷಿಸಿತು.
ಇನ್ನೊಂದು ಡಾಲ್ಫಿನ್ ರಕ್ಷಣಾ ಕಾರ್ಯ ಇಂದು ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಕ್ಷಿಸಿದ ಬೃಹತ್ ಗಾತ್ರದ ಮೀನನ್ನು ಸುರಕ್ಷಿತವಾಗಿ ಸರಯೂ ನದಿಗೆ ಬಿಡಲಾಗಿದೆ. ಇದಕ್ಕೂ ಮೊದಲು ಈ ಡಾಲ್ಫಿನ್ಗಳು ದೇವನ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವನ್-ಲಖನೌ ರಸ್ತೆಯಲ್ಲಿರುವ ಮಿಟ್ಟೈ ಗ್ರಾಮದ ಕಾಲುವೆ ಮತ್ತು ಗಾಂಧಿನಗರ ಸಮೀಪದ ಕಾಲುವೆಯಲ್ಲಿ ಇರುವುದನ್ನು ಗ್ರಾಮಸ್ಥರು ಗಮನಿಸಿದ್ದರು.
ಇದನ್ನೂ ಓದಿ: ಗ್ರಾಮಕ್ಕೆ ನುಗ್ಗಿ ಮಹಿಳೆ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ವಿಡಿಯೋ