ವೈದ್ಯೆಯ ಬೀಳ್ಕೊಡುಗೆ ಸಮಾರಂಭ : ಸೇವೆ ಮೆಚ್ಚಿ ಭಾವುಕರಾದ್ರು ಊರಿನ ಜನ - ಸರ್ಕಾರಿ ವೈದ್ಯೆ
🎬 Watch Now: Feature Video

ಉಡುಪಿ: ಸರ್ಕಾರಿ ವೈದ್ಯರು ಒಂದೂರಿಂದ ಇನ್ನೊಂದು ಊರಿಗೆ ವರ್ಗಾವಣೆ ಆಗೋದು ಸಾಮಾನ್ಯ. ಆದ್ರೆ ವರ್ಗಾವಣೆ ಆಗಿ ಇನ್ನೊಂದೂರಿಗೆ ಹೋಗುವಾಗ ಊರ ಜನರು ಭಾವುಕರಾಗೋದು ವಿರಳ. ವಿಶೇಷ ಅಂದ್ರೆ ಇಲ್ಲೊಂದು ಊರಿನಲ್ಲಿ ಸರ್ಕಾರಿ ವೈದ್ಯೆಯೊಬ್ಬರು ವರ್ಗಾವಣೆಯಾಗಿ ಹೋಗುವಾಗ ಊರಿನ ಜನ ಭಾವುಕರಾಗಿ ಕಣ್ಣೀರು ಹಾಕುತ್ತ ಬೀಳ್ಕೊಟ್ಟರು. ಆವರ್ಸೆ ಎಂಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸವಿತಾ ಕುಂದರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಊರಿನ ಜನರು ಭಾವುಕರಾದರು. ಡಾ. ಸವಿತಾ ಕುಂದರ್ ಕಳೆದ 12 ವರ್ಷಗಳಿಂದ ಆವರ್ಸೆ, ಹಿಲಿಯಾಣ, ನಂಜಾರು, ವಂಡಾರು ಮುಂತಾದ ಗ್ರಾಮಗಳ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿದ್ದು, ಗ್ರಾಮಸ್ಥರ ಭಾವನೆ ಈ ವೈದ್ಯರ ಸೇವೆಯ ಮಹತ್ವವನ್ನು ಸಾರಿ ಹೇಳುತ್ತಿತ್ತು.
Last Updated : Feb 3, 2023, 8:26 PM IST