ನೀರಿಗಿಳಿಯುವ ಮುನ್ನ ಕೋಣಗಳ ತಯಾರಿ ಹೇಗಿರುತ್ತೆ ಗೊತ್ತಾ ?
🎬 Watch Now: Feature Video
ಬೆಂಗಳೂರು: ಕಂಬಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ’ಬೆಂಗಳೂರು ಕಂಬಳ - ನಮ್ಮ ಕಂಬಳ‘‘ ಹೆಸರಿನಲ್ಲಿ ನಡೆಯುತ್ತಿರುವ ಈ ಉತ್ಸವಕ್ಕೆ 150ಕ್ಕೂ ಹೆಚ್ಚು ಚಾಂಪಿಯನ್ ಕೋಣಗಳ ಜೋಡಿ ಹಾಗೂ ನುರಿತ ಓಟಗಾರರು ಭಾಗಿಯಾಗಿದ್ದಾರೆ. ಮುಸ್ಲಿಂ ಸಮುದಾಯದ 6 ಜೋಡಿ, ಕ್ರಿಶ್ವಿಯನ್ ಸಮುದಾಯದ 4 ಜೋಡಿ ಕೋಣಗಳು ಭಾಗಿಯಾಗಿವೆ. ಸ್ಪರ್ಧೆಗೂ ಮುನ್ನ ಕೋಣಗಳನ್ನು ಓಟಗಾರರು ಅಣಿಗೊಳಿಸುವುದೇ ಆಸಕ್ತಿಕರವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಕರಾವಳಿ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಕೋಣಗಳು ಸ್ಪರ್ಧೆಯ ಹುರಿಯಾಳಾಗಿವೆ. ಕುಡಿಯುವ ನೀರು ಸೇರಿದಂತೆ ತಮ್ಮ ಕೋಣಗಳನ್ನು ಬೇಕಾದ ಸಕಲ ಸೌಲಭ್ಯಗಳನ್ನು ಬಹಳ ಮುತುವರ್ಜಿ ವಹಿಸಿದ್ದಾರೆ.
ಸ್ಪರ್ಧೆಗೂ ಬಿಸಿ ನೀರಿನ ಮಜ್ಜನ: ಸ್ಪರ್ಧೆಗೂ ಮುನ್ನ ಕೋಣಗಳನ್ನು ಬಿಸಿ ನೀರಿನಲ್ಲಿ ಮಜ್ಜನ ಮಾಡಿಸುತ್ತಾರೆ. ಇಲ್ಲಿನ ವಾತಾವರಣ ಹೊಂದಿಕೊಳ್ಳಲು ಅಗತ್ಯ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಅಖಾಡಕ್ಕೆ ಇಳಿಯಲು ಸಿದ್ಧವಾಗಿರುವ ಕಾಟಿ ಹಾಗೂ ರಾಜ ಕೋಣಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ವೆಚ್ಚ ತಗಲುತ್ತದೆ. ಕಂಬಳ ಸ್ಪರ್ಧೆಯಲ್ಲಿ ಗೆದ್ದು ಬಂಗಾರ ಪಡೆಯುವುದಕ್ಕಿಂತ ಕೆಲ ಕೋಣಗಳ ಮಾಲೀಕರಿಗೆ ಮನೆತನದ ಪ್ರತಿಷ್ಠೆಯಾಗಿದೆ. ನೀರಿಗಿಳಿಯುವ ಮುನ್ನ ಬಿಸಿ ನೀರಿನ ಮಜ್ಜನ ಮಾಡಿಸಿ ನಂತರ ಕೋಣಗಳಿಗೆ ಅಗತ್ಯವಾದ ಹುಲ್ಲು ನೀಡುತ್ತಾರೆ. ರೇಸ್ ವೇಳೆ ಕೋಣಗಳ ಮೇಲೆ ಚಿಟ್ಟೆ, ಇನ್ನಿತರ ಕ್ರಿಮಿಕೀಟ ಕೂರದಿರಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ನಂತರ ವಾಕಿಂಗ್ ಮಾಡಿಸಲಾಗುತ್ತದೆ. ಕಟ್ಟುಮಸ್ತಾಗಿ ಕೋಣಗಳನ್ನು ತಯಾರು ಮಾಡಿ, ದೃಷ್ಟಿ ತೆಗೆದು ಪೂಜೆ ಮಾಡಿದರಷ್ಟೇ ಸ್ಪರ್ಧೆಯ ಹುರಿಯಾಳು ಆಗಲಿವೆ ಅನ್ನೋದು ಮಾಲೀಕರ ನಂಬಿಕೆ.