ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣದ ಮಸಾಲಾ.. ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಕೀಟ ಭಕ್ಷ್ಯ ಪ್ರದರ್ಶನ - ಜಿರಳೆ ಫ್ರೈ
🎬 Watch Now: Feature Video
Published : Sep 11, 2023, 12:49 PM IST
|Updated : Sep 11, 2023, 6:49 PM IST
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ರೈತರ ಜಾತ್ರೆ, ಕೃಷಿ ಮೇಳದಲ್ಲಿ ಕೀಟಗಳ ಭಕ್ಷ್ಯ ಪ್ರದರ್ಶನ ಗಮನ ಸೆಳೆದಿದೆ. ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳನ್ನು ಈ ಪ್ರದರ್ಶನ ಅನಾವರಣಗೊಳಿಸಿದೆ.
ವಿವಿಧ ಕೀಟ ಬಳಸಿ ಸಿದ್ಧಪಡಿಸಿರುವ 15 ಭಕ್ಷ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೃವಿವಿ ಕೀಟ ಶಾಸ್ತ್ರ ವಿಭಾಗದಿಂದ ಈ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣದ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪು ಇರುವೆಯ ಫ್ರೈ ಪ್ರದರ್ಶನಕ್ಕಿಡಲಾಗಿದೆ. ಈಗಾಗಲೇ ಚೀನಾ, ಥಾಯ್ಲೆಂಡ್, ಉತ್ತರ ಕೋರಿಯಾದ ದೇಶಗಳಲ್ಲಿ ಈ ಭಕ್ಷ್ಯಗಳು ಚಾಲ್ತಿಯಲ್ಲಿದೆ. ಭಾರತದಲ್ಲಿ ಕೆಲವು ಕಡೆಯ ಆದಿವಾಸಿ ಸಮುದಾಯದವರು ಕೆಂಪು ಇರುವೆಯ ಫ್ರೈ ಸೇವಿಸುವ ಬಗ್ಗೆ ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ.
"ಈ ಹುಳಗಳು ಕೂಡ ಮಾಂಸಹಾರದ ರೀತಿಯೇ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಪ್ರೋಟಿನ್ ವಿಟಮಿನ್‍ಗಳೇ ತುಂಬಿರುವ ಕೀಟಗಳು ಆರೋಗ್ಯಕ್ಕೆ ಪೂರಕ. ಈ ಕಾರಣಕ್ಕಾಗಿ ಚೀನಾ, ಥಾಯ್ಲೆಂಡ್, ಕೋರಿಯಾ ದೇಶಗಳ ಜನ ಸೇವಿಸುವ ಪದಾರ್ಥಗಳಲ್ಲಿ ಕೀಟಗಳೂ ಇರುತ್ತವೆ. ಭಾರತೀಯರು ಸೇವಿಸಿದರೂ ಸಮಸ್ಯೆ ಆಗಲಾರದು"- ಶಿವಕುಮಾರ್ ಪಿಹೆಚ್ಡಿ ವಿದ್ಯಾರ್ಥಿ.
ಕೀಟಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕೃಷಿ ಮೇಳದಲ್ಲಿ ನಡೆಸಿರುವ ಈ ವಿನೂತನ ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.
ಇದನ್ನೂ ಓದಿ: ಕೃಷಿ ಮೇಳದಲ್ಲಿ ಸೌಲಭ್ಯದ ಜೊತೆ ಗ್ರಾಹಕರ ಕೊರತೆ: ರೈತ ಉತ್ಪಾದಕರ ಪ್ರತಿಭಟನೆ