ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ: ಬೈಕ್ ಮೂಲಕ ಅಯೋಧ್ಯೆಗೆ ಹೊರಟ ಯುವಕರು - ರಾಮಮಂದಿರ
🎬 Watch Now: Feature Video
Published : Jan 17, 2024, 4:42 PM IST
ಧಾರವಾಡ : ದೇಶಾದ್ಯಂತ ರಾಮಭಕ್ತರ ಸಂಭ್ರಮ ಮುಗಿಲು ಮುಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮೂಲದ ನಾಲ್ವರು ಯುವಕರು ರಾಮನ ದರ್ಶನಕ್ಕೆ ಹೊರಟಿದ್ದಾರೆ. ಹೌದು, ದರ್ಶನ್ ಪವಾರ, ದರ್ಶನ್ ಭಾವೆ, ಬಾಲರಾಜ ದೊಡಮನಿ, ಲಕ್ಷ್ಮಣ ಹಂಚಿನಮನಿ ಎಂಬ ನಾಲ್ವರು ಬೈಕ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ.
ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಆರಂಭಿಸಿರುವ ಯುವಕರು 2000 ಕಿಲೋ ಮೀಟರ್ ದೂರ ಬೈಕ್ ಮೂಲಕ ಹೊರಟಿದ್ದಾರೆ. ಒಂದು ರಾಯಲ್ ಎನ್ಫೀಲ್ಡ್ ಮತ್ತೊಂದು ಬೆನಾಲಿ ಎಂಬ ಬೈಕ್ ಮೂಲಕ ತೆರಳಿದ್ದಾರೆ.
ಯಾತ್ರೆ ಕೈಗೊಂಡಿರುವ ಯುವಕರಿಗೆ ಹೆದ್ದಾರಿಯಲ್ಲಿ ನಿಲ್ಲಿಸಿ ಅವರ ಸ್ನೇಹಿತರು ಶುಭ ಕೋರಿದರು. ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ ಯುವಕರು, ಪರಸ್ಪರ ಕೈ ಕುಲುಕುವ ಮೂಲಕ ಶುಭ ಹಾರೈಸಿದರು. ಯಾತ್ರೆ ಹಮ್ಮಿಕೊಂಡಿರುವ ನಾಲ್ವರು ಯುವಕರು ನಾಲ್ಕು ದಿನದಲ್ಲಿ ಅಯೋಧ್ಯೆ ತಲುಪಲಿದ್ದಾರೆ. ಇಲ್ಲಿನ ಸ್ಥಳೀಯರು, ಜನಪ್ರತಿನಿಧಿಗಳು ನಮಗೆ ಪಾಸ್ ವ್ಯವಸ್ಥೆ ಮಾಡಿಸಿಕೊಡಬೇಕು. ಗದ್ದಲ ಇರುವುದರಿಂದ ಸಮಸ್ಯೆಯಾಗಬಹುದು. ಹೀಗಾಗಿ ರಾಮನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಬಾಲರಾಮ ಮೂಡಿ ಬಂದ ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ?: ಶಿಲೆಯ ವೈಶಿಷ್ಟ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ