ಕೊಪ್ಪಳದ ಹುಲಿಗಿಗೆ ಹರಿದುಬಂದ ಭಕ್ತ ಸಾಗರ..
🎬 Watch Now: Feature Video
ಕೊಪ್ಪಳ: ಆಷಾಢ ಹುಣ್ಣಿಮೆ ಹಿನ್ನೆಲೆ ಸೋಮವಾರ ಹುಲಿಗಿಗೆ ಲಕ್ಷಾಂತರ ಭಕ್ತರು ಶಕ್ತಿ ದೇವತೆ ಹುಲಿಗೆಮ್ಮ ದೇವಿಯ ದರ್ಶನಕ್ಕಾಗಿ ಹುಲಿಗಿ ಕ್ಷೇತ್ರ ಸಾವಿರಾರು ಭಕ್ತರು ಆಗಮಿಸಿದರು. ಗುರು ಪೂರ್ಣಿಮೆ ಬೆನ್ನೆಲ್ಲೇ ಹುಲಿಗಿ ಕ್ಷೇತ್ರವು ಭಕ್ತರಿಂದ ತುಂಬಿ ತುಳುಕುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಹುಲಿಗೆಮ್ಮ ದೇವಿಯ ದರ್ಶನ ಪಡೆದು ಪೂನೀತರಾದರು. ಅಲ್ಲದೇ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯ ನಂತರ ಮಹಿಳಾ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ. ಕೊಪ್ಪಳ, ಗಂಗಾವತಿ, ಹೊಸಪೇಟೆ ಮಾರ್ಗವಾಗಿ ಹುಲಿಗಿಗೆ ಬಂದಿರುವ ಭಕ್ತರು, ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಭಕ್ತರು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸುತ್ತಿರುವ ದೃಶ್ಯ ಕಂಡು ಬಂತು.
ಇತ್ತೀಚೆಗೆ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ 9, 69,725 ರೂ. ಹಾಗೂ 225 ಗ್ರಾಂ ಚಿನ್ನ ಹಾಗೂ 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಸಂಗ್ರಹವಾಗಿರುವ ಕಾಣಿಕೆ ಮೊತ್ತವನ್ನು ಗಮನಿಸಿದರೆ, ಹುಲಿಗೆಮ್ಮ ದೇವಿ ಖ್ಯಾತಿಯು ಅರಿವಾಗುತ್ತದೆ.
ಇದನ್ನೂ ಓದಿ: Guru Purnima: ಗುರು ಪೂರ್ಣಿಮೆ ಎಫೆಕ್ಟ್.. ನಂಜುಂಡೇಶ್ವರನ ದೇವಸ್ಥಾನದಲ್ಲಿ ಭಕ್ತ ಸಾಗರ