ಗಂಗಾ ನದಿ ತಟದ ಶಿವಾಲಯದಲ್ಲಿ ಭಕ್ತರ ದಂಡು: ಭೋಲೆನಾಥನ ಜಪ - ದಕ್ಷ ಮಹಾರಾಜನ ಪುತ್ರಿ ಪಾರ್ವತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17785922-thumbnail-4x3-don.jpg)
ಹರಿದ್ವಾರ(ಉತ್ತರಾಖಂಡ): ಶಿವರಾತ್ರಿಯ ಹಿನ್ನೆಲೆ ಗಂಗಾ ನದಿಯ ತಟದಲ್ಲಿರುವ ದೇವಾಲಯಕ್ಕೆ ಇಂದು ಮುಂಜಾನೆಯಿಂದಲೇ ಭಕ್ತರು ಬಂದು ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ದಕ್ಷೇಶ್ವರ ಮಹಾದೇವ, ಬಿಲ್ಕೇಶ್ವರ ಮಹಾದೇವ, ತಿಲಭಾಂಡೇಶ್ವರ ಮಹಾದೇವ, ಗೌರಿ ಶಂಕರ ಮತ್ತು ನೀಲೇಶ್ವರ ಮಹಾದೇವ ದೇವಾಲಯಗಳಲ್ಲಿ ಭಕ್ತರು ಭೋಲೆನಾಥನ ಜಪ ಮಾಡುತ್ತಾ ಜಲಾಭಿಷೇಕ ಮಾಡುತ್ತಿದ್ದಾರೆ.
ಕಂಖಾಲ್‌ನ ದಕ್ಷೇಶ್ವರ ಮಹಾದೇವ ದೇವಾಲಯವನ್ನು ಶಿವನ ಅತ್ತೆಯ ಮನೆ ಎಂದು ಪರಿಗಣಿಸಲಾಗಿದೆ. ದಕ್ಷ ಮಹಾರಾಜನ ಪುತ್ರಿ ಪಾರ್ವತಿಯನ್ನು ಶಿವ ವರಿಸಿದ್ದರಿಂದ ದಕ್ಷೇಶ್ವರ ಶಿವ ಅತ್ತೆಯ ಮನೆ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಪಾಂಚಾಲೇಶ್ವರ ಮಹಾದೇವ ದೇವಾಲಯವು ಮಹಾಭಾರತ ಕಾಲದ್ದು ಎಂಬ ನಂಬಿಕೆ ಇದ್ದು ಪಂಚ ಪಾಂಡವರಿಂದ ಆರಾಧಿಸಲ್ಪಟ್ಟಿದ್ದರಿಂದ ಪಾಂಚಾಲೇಶ್ವರ ಎಂಬ ನಾಮ ಬಂತೆಂಬುದು ಪ್ರತೀತಿ.
ಇದನ್ನೂ ಓದಿ: ಮಹಾಶಿವರಾತ್ರಿಗೆ ಮುದ್ದೇಬಿಹಾಳ ಭಕ್ತರಿಂದ ಶಿವಲಿಂಗ ತಯಾರಿ: ವಿಡಿಯೋ