Watch... ಶಿರಡಿ ಸಾಯಿ ಮಂದಿರಕ್ಕೆ 30 ಲಕ್ಷ ಮೌಲ್ಯದ ನವರತ್ನದ ಮಾಲೆ ಸಮರ್ಪಣೆ
🎬 Watch Now: Feature Video
ಶಿರಡಿ (ಮಹಾರಾಷ್ಟ್ರ): ಹೈದರಾಬಾದ್ ನಿವಾಸಿಗಳಾದ ಕಾಮೆಪಲ್ಲಿ ಭೂಪಾಲ್ ಮತ್ತು ರಾಜಲಕ್ಷ್ಮೀ ಭೂಪಾಲ್ ದಂಪತಿ ಶಿರಡಿ ಸಾಯಿಬಾಬಾಗೆ ಸುಮಾರು 30 ಲಕ್ಷ ರೂ ಮೌಲ್ಯದ ನವರತ್ನ ಮಾಲೆಯನ್ನು ಕಾಣಿಕೆ ನೀಡಿದ್ದಾರೆ. ಭಾನುವಾರ ಮಧ್ಯಹ್ನಾ ಆರತಿಗೂ ಮುನ್ನ ಸಾಯಿಬಾಬಾರ ಪಾದಕ್ಕೆ ನವರತ್ನ ಮಾಲೆಯನ್ನ ಅರ್ಪಿಸಿದ್ದಾರೆ. ಜತೆಗೆ 31 ಸಾವಿರದ ರೂ ಮೌಲ್ಯದ 1178 ಗ್ರಾಂ ತೂಕದ ಬೆಳ್ಳಿತಟ್ಟೆ, ಗ್ಲಾಸ್ಗಳನ್ನು ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಬಗ್ಗೆ ರಾಜಲಕ್ಷ್ಮೀ ಭೂಪಾಲ್ ಅವರು ಮಾತನಾಡಿ, ನಮ್ಮ ವ್ಯಾಪಾರದಲ್ಲಿ ಉತ್ತಮ ಯಶಸ್ಸು ಕಂಡಿದ್ದು, ಎಲ್ಲ ಆಸೆಗಳು ಈಡೇರಿವೆ. ಹಾಗಾಗಿ ನಾವು ಕುಟುಂಬ ಸಮೇತವಾಗಿ ಬಾಬಾರ ದರ್ಶನಕ್ಕೆ ಬಂದಿದ್ದೇವೆ. ಮೊದಲಿನಿಂದಲೂ ನಾವು ಸಾಯಿಬಾಬಾರ ಭಕ್ತರಾಗಿದ್ದೇವೆ ಎಂದು ಹೇಳಿದರು. ಇನ್ನು ಶಿರಡಿ ಸಾಯಿ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ನಗದು ರೂಪದಲ್ಲಿ ಕಾಣಿಕೆಗಳು ಸಂಗ್ರಹವಾಗುತ್ತಿವೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಅದರಲ್ಲೂ ದೇವಸ್ಥಾನಕ್ಕೆ ಕಾಣಿಕೆ ನೀಡುವವರು ಹೆಚ್ಚಿನ ಸಂಖ್ಯೆಯವರು ಹೈದರಾಬಾದ್ ಮೂಲದವರೇ ಆಗಿದ್ದಾರೆ. ಸದ್ಯ ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಶಿರಡಿ ದೇವಸ್ಥಾನ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಪತ್ನಿ ಸಾವಿನ ಬಳಿಕವೂ ಅವರ ಆಸೆ ಈಡೇರಿಸಿದ ಪತಿ : ಸಾಯಿ ಬಾಬಾಗೆ 40 ಲಕ್ಷದ ಕಿರೀಟ ದಾನ