ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯ: ಶಿವಮೊಗ್ಗದಲ್ಲಿ ಪ್ರಾತ್ಯಕ್ಷಿಕೆ, ತರಬೇತಿ - apad mitra
🎬 Watch Now: Feature Video
ಶಿವಮೊಗ್ಗ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಾರಿಗೆ ತಂದಿರುವ ಆಪದ್ ಮಿತ್ರ (ಆಪತ್ತು ಮಿತ್ರ) ಎಂಬ ಯೋಜನೆಯಡಿ ಆಯ್ದ ಜಿಲ್ಲೆಗಳಲ್ಲಿ ಸ್ವಯಂಸೇವಕರಿಗೆ ರಕ್ಷಣಾ ಕಾರ್ಯ ಕುರಿತು ಹತ್ತು ದಿನಗಳ ತರಬೇತಿ ನೀಡಲಾಗುತ್ತದೆ. ಅದರಂತೆ ಶಿವಮೊಗ್ಗದಲ್ಲೂ ಸಹ ಅಪತ್ತು ಮಿತ್ರ ಕಾರ್ಯಕ್ರಮದ ಅನುಷ್ಠಾನ ಯಶಸ್ವಿಯಾಗಿ ನಡೆಯುತ್ತಿದೆ. ಸುಮಾರು 110 ಜನರಿಗೆ ಆಪತ್ತು ಮಿತ್ರ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಶಿವಮೊಗ್ಗ ನಗರ ಸಮೀಪದ ನಿದಿಗೆ ಕೆರೆಯಲ್ಲಿ ಪ್ರವಾಹ ಬಂದಾಗ ಸ್ವಯಂ ರಕ್ಷಣೆ ಹಾಗೂ ನೆರೆಹೊರೆಯವರ ರಕ್ಷಣೆ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಏರ್ಪಡಿಸಿದ್ದರು. ಈ ಪ್ರಾತ್ಯಕ್ಷಿಕೆಯಲ್ಲಿ ಸ್ವಯಂ ಸೇವಕರು ಜನರನ್ನು ಹೇಗೆ ರಕ್ಷಣೆ ಮಾಡಬೇಕು, ಪ್ರಥಮ ಚಿಕಿತ್ಸೆ ನೀಡುವ ಕ್ರಮ, ತುರ್ತು ಚಿಕಿತ್ಸೆಗೆ ಸಾಗಿಸುವುದು ಸೇರಿ ಪ್ರವಾಹ ಸಂದರ್ಭದಲ್ಲಿ ಹೇಗೆ ರಕ್ಷಣೆ ಮಾಡಬೇಕು ಎಂಬುದರ ಪ್ರಾಯೋಗಿಕ ಪಾಠವನ್ನ ಹೇಳಿಕೊಡಲಾಯ್ತು.
Last Updated : Feb 3, 2023, 8:24 PM IST