ಆಹಾರ ಅರಸಿ ಕಾಡಿನಿಂದ ಹೊಸಕೋಟೆಗೆ ಬಂದ ಜಿಂಕೆ- ವಿಡಿಯೋ - ಹೊಸಕೋಟೆ ಅರಣ್ಯಾಧಿಕಾರಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/16-06-2023/640-480-18768158-thumbnail-16x9-tnu.jpg)
ಹೊಸಕೋಟೆ (ಬೆಂ.ಗ್ರಾ): ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಹೊಸಕೋಟೆ ನಗರಕ್ಕೂ ಜಿಂಕೆಯೊಂದು ಆಹಾರ ಅರಸಿ ಬಂದಿದೆ. ನಗರದ ಕೆಇಬಿ ವೃತ್ತದ ಬಳಿ ಸಣ್ಣ ಜಿಂಕೆ ಪ್ರತ್ಯಕ್ಷವಾಗಿದೆ. ಇದನ್ನು ನೋಡಲು ಗ್ರಾಮದ ಜನರು ಮುಗಿಬಿದ್ದರು. ಫೋಟೋ, ವಿಡಿಯೋ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಹೊಸಕೋಟೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಜಿಂಕೆ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದು, ಸುರಕ್ಷಿತವಾಗಿ ಸೆರೆಹಿಡಿದರು. ಜಿಂಕೆಯನ್ನು ಅರಣ್ಯಕ್ಕೆ ಬಿಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೊಸಕೋಟೆ ಅರಣ್ಯಾಧಿಕಾರಿ ಪುಷ್ಪಲತಾ ತಿಳಿಸಿದರು.
ಇದೇ ರೀತಿ ರಾಜ್ಯದ ಅನೇಕ ಕಡೆಗಳಲ್ಲಿ ಇತ್ತೀಚೆಗೆ ಜಿಂಕೆ, ಆನೆ, ಹುಲಿ, ಚಿರತೆ ಸೇರಿದಂತೆ ಅನೇಕ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿವೆ. ಆಹಾರ ಅರಸಿ ಬರುತ್ತಿರುವ ಇವುಗಳು ಬೆಳೆ ನಾಶ ಮಾಡುವುದಲ್ಲದೇ, ಜನರ ಪ್ರಾಣವನ್ನೂ ತೆಗೆದ ಉದಾಹರಣೆಗಳಿವೆ. ಹೀಗಾಗಿ ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಅರಣ್ಯ ನಾಶದಿಂದಲೇ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಅನ್ನೋದು ವಾಸ್ತವ.
ಇದನ್ನೂ ಓದಿ: ಸರ್ಕಾರಿ ಬಸ್ಗಳೆಲ್ಲ ರಶ್ ರಶ್.. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ: ವಿಡಿಯೋ