ಸಿತ್ರಾಂಗ್ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ 20 ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಿದ ಭಾರತ - ಭಾರತೀಯ ಕೋಸ್ಟ್ ಗಾರ್ಡ್
🎬 Watch Now: Feature Video
ಒಡಿಶಾದ ಜಗತ್ಸಿಂಗ್ಪುರ ಕರಾವಳಿಯಲ್ಲಿ ಸಿಲುಕಿಕೊಂಡಿದ್ದ 20 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ ಬಳಿಕ ಬಾಂಗ್ಲಾದೇಶದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಆದರೆ ಸುಮಾರು 20 ಮೀನುಗಾರರು ಬಚಾವ್ ಆಗಿದ್ದು, ಫ್ಲೋಟಿಂಗ್ ಬಾರ್ ಮೇಲೆ ಮೀನುಗಾರರನ್ನು ನೋಡಿದ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದ್ದಾರೆ. ಚಂಡಮಾರುತವು ಹಾದುಹೋದ ನಂತರ ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಾಗ ಈ ರಕ್ಷಣೆ ಕಾರ್ಯ ನಡೆದಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ ಹಡಗಿನ ಸಹಾಯದಿಂದ ಮೀನುಗಾರರನ್ನು ರಕ್ಷಿಸಲಾಯಿತು. ಭಾರತೀಯ ಕೋಸ್ಟ್ ಗಾರ್ಡ್ ಮೀನುಗಾರರನ್ನು ರಕ್ಷಿಸಿದ ನಂತರ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
Last Updated : Feb 3, 2023, 8:30 PM IST