ಬೆಂಗಳೂರಿನಲ್ಲಿ ಗಮನ ಸೆಳೆದ ಸೇನೆಯ ಶ್ವಾನಗಳ ಸಾಹಸ ಪ್ರದರ್ಶನ: ವಿಡಿಯೋ - ಶ್ವಾನಗಳ ಸಾಹಸ ಪ್ರದರ್ಶನ

🎬 Watch Now: Feature Video

thumbnail

By

Published : Feb 23, 2023, 10:17 PM IST

ಬೆಂಗಳೂರು: ಬೆಂಗಳೂರಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ವತಿಯಿಂದ ಗುರುವಾರದಿಂದ ಎರಡು ದಿನಗಳ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಹೆಚ್​ಎ)ದ 4ನೇ ರಾಷ್ಟ್ರೀಯ ಪೊಲೀಸ್​ ಕೆ9 ಸೆಮಿನಾರ್​ ಆರಂಭವಾಗಿದೆ. ಸಿಆರ್‌ಪಿಎಫ್ ಮಹಾನಿರ್ದೇಶಕ ಡಾ.ಸುಜೋಯ್ ಲಾಲ್ ಥಾಸೆನ್ ಸೆಮಿನಾರ್​ ಉದ್ಘಾಟಿಸಿದರು. ಇದೇ ವೇಳೆ ಭದ್ರತಾ ಪಡೆಯ ಶ್ವಾನ ದಳವು ತನ್ನ ಸಾಮರ್ಥ್ಯ ಪ್ರದರ್ಶಿಸಿತು.

ಸಿಆರ್‌ಪಿಎಫ್‌ನ ಡಾಗ್ ಬ್ರೀಡಿಂಗ್ ಅಂಡ್​ ಟ್ರೈನಿಂಗ್ ಸ್ಕೂಲ್ (ನಾಯಿ ಸಾಕಣೆ ಮತ್ತು ತರಬೇತಿ ಶಾಲೆ) ''ಪೆಟ್ರೋಲ್ ಕೆ9: ವಿಜಿಲ್​ ಅಂಡ್​ ಕಾಂಬ್ಯಾಟ್​'' (Patrol K9: Vigil and Combat) ಎಂಬ ಧ್ಯೇಯದೊಂದಿಗೆ ಸೆಮಿನಾರ್ ಆಯೋಜಿಸಿದೆ. ಇದರಲ್ಲಿ ನೂರಕ್ಕೂ ಹೆಚ್ಚು ತಜ್ಞರು ಮತ್ತು ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ರಾಜ್ಯ ಪೊಲೀಸ್, ಕಾನೂನು ಜಾರಿ ಸಂಸ್ಥೆ ಮತ್ತು ದೇಶದ ಪಶುವೈದ್ಯ ತಜ್ಞರು ಭಾಗವಹಿಸಿದ್ದಾರೆ ಎಂದು ಸಿಆರ್‌ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ವನ್ಯಜೀವಿ ರಕ್ಷಣೆ, ಸಂತಾನೋತ್ಪತ್ತಿ, ಭದ್ರತಾ ಸವಾಲು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಜಿ ಡಾ.ಸುಜೋಯ್ ಲಾಲ್ ಥಾಸೆನ್​ ಅವರು 4ನೇ ರಾಷ್ಟ್ರೀಯ ಪೊಲೀಸ್ ಕೆ9 ಸೆಮಿನಾರ್​ ಕಿರುಪುಸ್ತಕ ಸಹ ಬಿಡುಗಡೆ ಮಾಡಿದರು. ಜೊತೆಗೆ ಸೇನೆಯ ಶ್ವಾನಗಳ ಸಾಹಸ ಪ್ರದರ್ಶನವು ಗಮನ ಸೆಳೆಯಿತು. 

ಇದನ್ನೂ ಓದಿ: 'ಡಿಶ್‌ವಾಶರ್' ಕಸ್ಟಮರ್ ಕೇರ್​ ನಂಬರ್​ ಹುಡುಕಲು ಹೋಗಿ ₹8 ಲಕ್ಷ ಕಳೆದುಕೊಂಡ ವೃದ್ಧ ದಂಪತಿ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.