ಗೋಕರ್ಣ ಶಿವನ ಆತ್ಮಲಿಂಗ ದರ್ಶನಕ್ಕೆ ಭಕ್ತರ ದಂಡು.. ವಿಶೇಷ ಪೂಜೆ ಸಲ್ಲಿಸಿದ ಜನರು - ಗೋಕರ್ಣದ ಮಹಾಬಲೇಶ್ವರ
🎬 Watch Now: Feature Video
ಕಾರವಾರ: ಮಹಾಶಿವರಾತ್ರಿ ಹಿನ್ನೆಲೆ ಪುರಾಣ ಪ್ರಸಿದ್ಧ ದಕ್ಷಿಣಕಾಶಿ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನಕ್ಕಾಗಿ ಜನಸಾಗರವೇ ಹರಿದುಬರುತ್ತಿದೆ. ಶಿವರಾತ್ರಿಯಂದು ಆತ್ಮಲಿಂಗವನ್ನು ಮುಟ್ಟಿದರೆ ಕಷ್ಟಗಳು ಬಗೆಹರಿದು ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಭಕ್ತರು ನಸುಕಿನ ಜಾವ 2 ಗಂಟೆಯಿಂದಲೇ ದೇವಸ್ಥಾನದ ಎದುರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ರಾಜ್ಯದಿಂದ ಮಾತ್ರವಲ್ಲ, ನಾನಾ ರಾಜ್ಯಗಳಿಂದ ಸಾವಿರಾರು ಭಕ್ತರು ಆತ್ಮಲಿಂಗದ ದರ್ಶನಕ್ಕಾಗಿ ಆಗಮಿಸಿದ್ದಾರೆ. ಭಕ್ತರ ಕಿಲೋ ಮೀಟರ್‌ಗಟ್ಟಲೇ ಸಾಲು ನಿಂತಿದ್ದು, ದೇವರ ದರ್ಶನಕ್ಕೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು, ಭಕ್ತರು ಆತ್ಮಲಿಂಗಕ್ಕೆ ಹಾಲು, ಬಿಲ್ವಪತ್ರೆ, ನೀರನ್ನು ಹಾಕಿ ಪೂಜಾ ಕಾರ್ಯ ನೆರವೇರಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ತಾಲೂಕಾ ಆಡಳಿತ ಕ್ರಮ ಕೈಗೊಂಡಿದ್ದು, ರಾತ್ರಿಯವರೆಗೆ ಸಹಸ್ರಾರು ಭಕ್ತರು ಆತ್ಮಲಿಂಗ ದರ್ಶನವನ್ನು ಪಡೆಯಲಿದ್ದಾರೆ.
ಇದನ್ನೂಓದಿ:ಚಿಕ್ಕಬಳ್ಳಾಪುರ ಆದಿಯೋಗಿ ಪ್ರತಿಮೆಯ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್