ಮೈಸೂರು ನಗರದ ಮೋರಿಯಲ್ಲಿ ಮೊಸಳೆ ಪ್ರತ್ಯಕ್ಷ: ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ನಗರದ ಎಲೆ ತೋಟದ ಮೋರಿಯಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ಮೊಸಳೆ, ಇಂದು ಮತ್ತೆ ಎರಡನೇ ಬಾರಿ ಕಾಣಿಸಿಕೊಂಡಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ನಗರದ ರಾಮಾನುಜ ರಸ್ತೆಯ ಎಲೆ ತೋಟದ ಬಳಿಯ ಮೋರಿಯಲ್ಲಿ ಕಳೆದ ವಾರ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಇನ್ನು, ಮೊಸಳೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಿಸಿದರೂ ತಪ್ಪಿಸಿಕೊಂಡು ಹೋಗಿತ್ತು. ಇಂದು ಅದೇ ಮೊಸಳೆ ಎಲೆ ತೋಟದ ಮೋರಿಯ ಮೇಲ್ಭಾಗದಲ್ಲಿರುವುದನ್ನು ಕಂಡ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:30 PM IST