ಗದ್ದೆಯಲ್ಲಿ ಪ್ರತ್ಯಕ್ಷ್ಯವಾದ 9 ಅಡಿ ಉದ್ದದ ಬೃಹದಾಕಾರದ ಮೊಸಳೆ - ಭತ್ತದ ಗದ್ದೆಯಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷ
🎬 Watch Now: Feature Video

ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ರಾಜವಾಳ ಬಳಿ ಭತ್ತದ ಗದ್ದೆಯಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ತುಂಗಭದ್ರಾ ನದಿಯಿಂದ ಹೊರಗೆ ಬಂದ ಬೃಹತ್ ಮೊಸಳೆ ಭತ್ತದ ಗದ್ದೆಯಲ್ಲಿ ಓಡಾಡುತಿತ್ತು. ಸುಮಾರು 9 ಅಡಿ ಉದ್ದದ ಬೃಹದಾಕಾರದ ಮೊಸಳೆ ಕಂಡು ರೈತರು ಗಾಬರಿಗೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಗ್ಗದ ನೆರವಿನಿಂದ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಹರಸಾಹಸ ಪಟ್ಟು ಮೊಸಳೆ ಸೆರೆಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದು ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಯಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಮನ ಸೆಳೆದ ಸೇನೆಯ ಶ್ವಾನಗಳ ಸಾಹಸ ಪ್ರದರ್ಶನ: ವಿಡಿಯೋ