Kolar crime news.. ಬೈಕ್ನಲ್ಲಿರಿಸಿದ್ದ ಹಣ ಎಗರಿಸಿ ಪರಾರಿಯಾದ ಖದೀಮರು - ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಬೈಕ್ನಲ್ಲಿರಿಸಿದ್ದ ಹಣ ಎಗರಿಸಿ ಪರಾರಿಯಾದ ಖದೀಮರು
🎬 Watch Now: Feature Video
ಕೋಲಾರ : ದ್ವಿಚಕ್ರ ವಾಹನದಲ್ಲಿ ಇರಿಸಿದ್ದ ಒಂದೂವರೆ ಲಕ್ಷ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ವೇಣು ಶಾಲೆಯ ವೃತ್ತದಲ್ಲಿ ನಡೆದಿದೆ. ಚಿರುವನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬುವರು ಕಾರು ಖರೀದಿಸುವ ಸಲುವಾಗಿ ಬ್ಯಾಂಕ್ನಿಂದ ತಂದು ಬೈಕ್ನಲ್ಲಿ ಇರಿಸಿದ್ದ ಹಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೈ ಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರು ಖರೀದಿಸುವ ಸಲುವಾಗಿ ಕೃಷ್ಣಾರೆಡ್ಡಿ ಅವರ ಮಕ್ಕಳು ಇವರ ಬ್ಯಾಂಕ್ ಖಾತೆಗೆ ಹಣವನ್ನು ಹಾಕಿದ್ದರು. ಕೃಷ್ಣಾ ರೆಡ್ಡಿ ಅವರು ಈ ಹಣವನ್ನು ಶ್ರೀನಿವಾಸಪುರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ನಿಂದ ಡ್ರಾ ಮಾಡಿ ತಂದು, ತಮ್ಮ ಬೈಕ್ನ ಎದುರಿನ ಚೀಲದಲ್ಲಿ ಇರಿಸಿದ್ದರು. ಬಳಿಕ ಮನೆಗೆ ಹಿಂತಿರುಗುವಾಗ ಇಲ್ಲಿರುವ ಬೇಕರಿಯೊಂದಕ್ಕೆ ತೆರಳಿದ್ದಾರೆ. ಈ ವೇಳೆ ಬ್ಯಾಂಕ್ನಿಂದಲೇ ಕೃಷ್ಣಾ ರೆಡ್ಡಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಚಾಲಾಕಿ ಕಳ್ಳರು ಕೃಷ್ಣಾರೆಡ್ಡಿ ಅವರು ತಿಂಡಿ ತೆಗೆದುಕೊಳ್ಳಲು ಬೇಕರಿ ಮುಂದೆ ಬೈಕ್ ನಿಲ್ಲಿಸಿ ಹೋದಾಗ ಬೈಕಿನಲ್ಲಿದ್ದ ಒಂದೂವರೆ ಲಕ್ಷ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಾಮರಾಜನಗರ ಗಡಿಯಲ್ಲಿ ಮರಿ ಆನೆ ಅಟ್ಯಾಕ್...ಸವಾರ ಜಸ್ಟ್ ಮಿಸ್, ಬೈಕ್ ಪೀಸ್-ಪೀಸ್