ಸೆಂಟ್ರಲ್ ಜೈಲಿನಲ್ಲಿ ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ವೀಕ್ಷಿಸಿದ ಕೈದಿಗಳು: ವಿಡಿಯೋ - ಮಧುರೈ ಸೆಂಟ್ರಲ್ ಜೈಲಿನಲ್ಲಿ ನೇರ ಪ್ರಸಾರ
🎬 Watch Now: Feature Video
Published : Nov 19, 2023, 9:09 PM IST
ಮಧುರೈ (ತಮಿಳುನಾಡು): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ತಮಿಳುನಾಡಿನ ಮಧುರೈ ಸೆಂಟ್ರಲ್ ಜೈಲಿನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಇದರಿಂದ ಜೈಲಿನ ಕೊಠಡಿಗಳಲ್ಲೇ ಕುಳಿತು ಕೈದಿಗಳು ಮಹತ್ವದ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ.
ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸೀಸ್ ತಂಡಗಳು ಮುಖಾಮುಖಿಯಾಗಿವೆ. ಪ್ರಶಸ್ತಿ ಸುತ್ತಿನ ಈ ಪಂದ್ಯವನ್ನು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೀಡುತ್ತಿತ್ತು. ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಲಿ ಎಂದು ಅಸಂಖ್ಯಾತ ಭಾರತೀಯರು ಹಾಗೂ ಕ್ರೀಡಾಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಇದರ ನಡುವೆ ಕ್ರಿಕೆಟ್ ಜ್ವರವು ಜೈಲಿಗೂ ತಲುಪಿದೆ.
ವಿವಿಧ ಸನ್ನಿವೇಶದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಕೈದಿಗಳನ್ನು ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಕ್ರೀಡಾ ಉತ್ಸಾಹ ತುಂಬ ನಿಟ್ಟಿನಲ್ಲಿ ಮಧುರೈ ಜೈಲಿನಲ್ಲಿ ಕ್ರಿಕೆಟ್ ಫೈನಲ್ ಪಂದ್ಯದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಮಧುರೈ ಕಾರಾಗೃಹದ ವ್ಯಾಪ್ತಿಯ ಜಿಲ್ಲಾ ಮತ್ತು ಶಾಖಾ ಕಾರಾಗೃಹಗಳ ಕೈದಿಗಳು ನೇರ ಪ್ರಸಾರ ನೋಡಿದ್ದಾರೆ. ಜೈಲಿನ ಸಿಬ್ಬಂದಿಯೊಂದಿಗೆ ಹಲವಾರು ವಿಚಾರಣಾಧೀನ ಮತ್ತು ಶಿಕ್ಷೆಗೊಳಗಾದ ಕೈದಿಗಳು ಮಹತ್ವದ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್: ದೆಹಲಿಯ ಜೈಲುಗಳಲ್ಲಿ ಕೈದಿಗಳಿಗೆ ಪಂದ್ಯ ವೀಕ್ಷಿಸಲು ವ್ಯವಸ್ಥೆ