ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್: ಎಲ್ಲೆಡೆ ಪಟಾಕಿ ಹಚ್ಚಿ ಕಾರ್ಯಕರ್ತರ ಖುಷಿ - ಕರ್ನಾಟಕ ಕುರುಕ್ಷೇತ್ರ 2023
🎬 Watch Now: Feature Video

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮಹಾತೀರ್ಪು ಪ್ರಕಟವಾಗುತ್ತಿದ್ದು, ನಿಚ್ಚಳ ಬಹುಮತದತ್ತ ಕಾಂಗ್ರೆಸ್ ಪಕ್ಷ ಸನಿಹವಾಗುತ್ತಿದೆ. ಪಕ್ಷದ ನಾಯಕರು ಗೆಲುವು ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈವರೆಗೂ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, 16 ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಇದು ಕಾರ್ಯಕರ್ತರ ಉತ್ಸಾಹಕ್ಕೆ ಕಾರಣವಾಗಿದೆ.
ನವದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್ ಗೆಲುವಿನ ಸಂಭ್ರಮ ನಡೆಸಿದೆ. ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿರುವ ಕಾರ್ಯಕರ್ತರು ಜಯಘೋಷಗಳ ಜೊತೆಗೆ ನರ್ತಿಸುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷ ಗೆಲುವಿನ ಮನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ "ವಿನ್ನಿಂಗ್" ಸಿಂಬಲ್ ತೋರಿಸಿ ಸಂಭ್ರಮಾಚರಿಸಿದ್ದಾರೆ.
ಆಡಳಿತಾರೂಢ ಬಿಜೆಪಿ 64 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಹೊಂದಿದೆ. 5 ಕ್ಷೇತ್ರಗಳಲ್ಲಿ ಈವರೆಗೂ ಗೆದ್ದಿದೆ. ಜೆಡಿಎಸ್ 25 ಸ್ಥಾನಗಳಲ್ಲಿ ಮುಂದಿದ್ದರೆ, ಓರ್ವ ಅಭ್ಯರ್ಥಿ ಮಾತ್ರ ಗೆಲುವು ಕಂಡಿದ್ದಾರೆ. ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು 113 ಮ್ಯಾಜಿಕ್ ನಂಬರ್ ಬೇಕಿದೆ.
ಓದಿ: ಬಿಜೆಪಿಗೆ ಮುಳುವಾದ ಹಿರಿಯರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಿದ ಹೊಸ ಪ್ರಯೋಗ!