ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಮೋದಿಗೆ ಕಪ್ಪುಪಟ್ಟಿ ಪ್ರದರ್ಶಿಸಲು ಕಾಂಗ್ರೆಸ್ ಸಜ್ಜು - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಧಾರವಾಡ: ಭಾನುವಾರ ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ ತೋರಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೂರೆ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಜಲಮಂಡಳಿ ನೌಕರರ ಮುಷ್ಕರ ಹಿನ್ನೆಲೆ ನೌಕರರಿಗೆ ಬಾಕಿ ಇರುವ ಸಂಬಳ ನೀಡಬೇಕು. ಕೆಲಸದಿಂದ ವಜಾ ಮಾಡಿದವರನ್ನ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. 650 ಕುಟುಂಬಗಳು ಬೀದಿಗೆ ಬಿದ್ದಿವೆ. ಬೆಲ್ಲದ್ ಅವರು ಹಾಗೂ ಜೋಶಿಯವರು ಎಲ್ಲ ಸರಿ ಮಾಡ್ತೀನಿ ಅಂತಾರೆ. ನೌಕರರ ಸ್ಯಾಲರಿಯನ್ನ ಪರಿಹಾರ ಮಾಡಬೇಕು ಎಂದರು.
ಇಲ್ಲದಿದ್ದರೆ ಮೋದಿಯವರಿಗೆ ಕಪ್ಪು ಬಾವುಟ ತೋರಿಸಲು ಸಜ್ಜಾಗಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಅಲ್ಲ. ಬಿಜೆಪಿಯವರು ಕಪ್ಪು ಬಾವುಟ ತೋರಿಸೋಕೆ ಬಂದ್ರು. ಅವರಿಗೂ ನಮ್ಮಿಂದ ಸ್ವಾಗತ. ಜಗದೀಶ್ ಶೆಟ್ಟರ್ ಐಐಟಿಯನ್ನ ರಾಯಚೂರಿಗೆ ನೀಡಿದ್ರು. ಆಗ ರಾಯರೆಡ್ಡಿ ಹಾಗೂ ಆರ್ ವಿ ದೇಶಪಾಂಡೆ ಇಲ್ಲಿಗೆ ಐಐಟಿ ಬರೋಕೆ ಪ್ರಮುಖ ಕಾರಣ. ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಚಿಂಚೋರೆ ವ್ಯಂಗ್ಯವಾಡಿದರು.
ಇದನ್ನೂ ಓದಿ : ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಫಿಟ್ಸ್: ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ