ಸಂಸತ್ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ - ಪ್ರತಾಪ್ ಸಿಂಹ ಕಚೇರಿ
🎬 Watch Now: Feature Video
Published : Dec 13, 2023, 7:02 PM IST
|Updated : Dec 13, 2023, 7:42 PM IST
ಮೈಸೂರು : ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದು ಸಂಸತ್ ಭವನಕ್ಕೆ ನುಗ್ಗಿದ ಪ್ರಕರಣ ವಿಚಾರವಾಗಿ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಆಗ್ರಹಿಸಿ ಮೈಸೂರು ಜಿಲ್ಲಾ ಹಾಗೂ ಮೈಸೂರು ನಗರ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
ಮೈಸೂರಿನ ಜಲದರ್ಶಿನಿ ಮುಂಭಾಗ ಇರುವ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಏಕಾಏಕಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಪ್ರತಿಭಟನಕಾರರನ್ನ ಪೊಲೀಸರು ತಡೆದರು. ಆದರೂ ಕಾಂಪೌಂಡ್ ಹಾರಿ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದೇ ವೇಳೆ, ಕೆಲ ಕಾರ್ಯಕರ್ತರು ಮೈಸೂರು- ಮಡಿಕೇರಿ ರಸ್ತೆ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಮನವೊಲಿಸಲು ಯತ್ನಿಸಿದ್ದು, ಪ್ರಯತ್ನ ಫಲನೀಡದ ಕಾರಣ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲದರ್ಶಿನಿ ಅತಿಥಿ ಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವೀಕ್ಷಕರ ಪಾಸ್ ಪಡೆದ ಇಬ್ಬರು ಇಂದು ಲೋಕಸಭೆಗೆ ನುಗ್ಗಿ ಹಂಗಾಮ ಸೃಷ್ಟಿಸಿದ್ದರು. ಹೀಗೆ ಸದನಕ್ಕೆ ನುಗ್ಗಿದವರನ್ನು ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಸಾಗರ್ ಶರ್ಮಾ ಬಳಿಯಿದ್ದ ಸಂದರ್ಶಕರ ಪಾಸ್ ಸಹ ಪತ್ತೆಯಾಗಿದೆ. ಇದರಿಂದ ಈತನ ಹೆಸರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮಾರ್ದನಿಸಿದ ಪ್ರತಾಪ್ ಸಿಂಹ ಪಾಸ್ ವಿಷಯ: ಬಿಜೆಪಿ - ಕಾಂಗ್ರೆಸ್ ಮಧ್ಯೆ ವಾಕ್ಸಮರ