ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಾಶ್ಮೀರದ ನೈಜೀನ್ ನದಿಯಲ್ಲಿ ದೋಣಿ ವಿಹಾರ: ವಿಡಿಯೋ - Sonia Gandhi meet jammu kashmir
🎬 Watch Now: Feature Video
Published : Aug 26, 2023, 2:11 PM IST
ಜಮ್ಮು ಕಾಶ್ಮೀರ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶ್ರೀನಗರಕ್ಕೆ ಖಾಸಗಿ ಪ್ರವಾಸ ಕೈಗೊಂಡಿದ್ದು, ಇಲ್ಲಿನ ನೈಜೀನ್ ಸರೋವರದಲ್ಲಿ ದೋಣಿ ವಿಹಾರ ನಡೆಸಿ ಕೆಲಕಾಲ ಆನಂದಿಸಿದರು. ಎರಡು ದಿನಗಳ ಕಾಶ್ಮೀರ ಭೇಟಿ ನೀಡಿರುವ ಅವರು ಪಕ್ಷದ ಯಾವುದೇ ಸಭೆ, ಸಮಾರಂಭ, ನಾಯಕರ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಪಕ್ಷ ತಿಳಿಸಿದೆ.
ಸಂಪೂರ್ಣ ಖಾಸಗಿ ಪ್ರವಾಸವಾಗಿರುವ ಕಾರಣ ಅವರು ಇಲ್ಲಿನ ಆಹ್ಲಾದಕರ ವಾತಾವರಣ ಸವಿಯಲಿದ್ದಾರೆ. ಇದರ ಭಾಗವಾಗಿ ಇಂದು ಅವರು ಸುಂದರ ನೈಜೀನ್ ನದಿಯಲ್ಲಿ ಹಡಗಿನಲ್ಲಿ ವಿಹರಿಸಿದ್ದಾರೆ. ಇದರ ಬಳಿಕ ಈಗಾಗಲೇ ಜಮ್ಮು ಕಾಶ್ಮೀರ ಮತ್ತು ಲಡಾಖ್ನಲ್ಲಿ ಒಂದು ವಾರದಿಂದ ಕಾಲ ಕಳೆಯುತ್ತಿರುವ ಪಕ್ಷದ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಪುತ್ರನ ಜೊತೆಗೆ 2 ದಿನಗಳ ಕಾಲ ತಾಯಿ ಸೋನಿಯಾ ಅವರು ಇರಲಿದ್ದಾರೆ ಎಂದು ತಿಳಿದುಬಂದಿದೆ.
ಲಡಾಖ್ ಪ್ರವಾಸಲ್ಲಿರುವ ರಾಹುಲ್ ಗಾಂಧಿ ಅವರು ಬೈಕ್ ರೈಡ್ ಮತ್ತು ರಾಜೀವ್ ಗಾಂಧಿ ಅವರಿಗೆ ಲಡಾಖ್ನ ಪ್ಯಾಂಗೋಂಗ್ ಸರೋವರದಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಕಾಶ್ಮೀರಕ್ಕೆ ಆಗಮಿಸಿದ್ದು, ತಾಯಿ ಮತ್ತು ಪುತ್ರ ಖಾಸಗಿಯಾಗಿ ಎರಡು ಇಲ್ಲಿನ ಸೊಬಗನ್ನು ಸವಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆ. 23 ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ... ವಿಕ್ರಮ ಇಳಿದ ತಾಣವನ್ನ’ಶಿವಶಕ್ತಿ’ ಪಾಯಿಂಟ್ ಎಂದು ಕರೆದ ಮೋದಿ!