ಸ್ಕಿಡ್ ಆಗಿ ಕೆಳಗೆ ಬೀಳುತ್ತಿರುವ ಬೈಕ್ ಸವಾರರು, ಸಾಮಾಜಿಕ ಮಾಧ್ಯಮದ ಮೂಲಕ ಸ್ಥಳೀಯರಿಂದ ದೂರು: ವಿಡಿಯೋ - road repair
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/17-01-2024/640-480-20529536-thumbnail-16x9-ck.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jan 17, 2024, 4:38 PM IST
ಬೆಂಗಳೂರು: ಬಿಳೇಕಳ್ಳಿಯ ರಾಘವೇಂದ್ರ ಕಾಲೋನಿಯ ಮೊದಲನೇ ಕ್ರಾಸ್ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲಾಗಿದ್ದು, ಬೈಕ್ ಸವಾರರು ವೇಗವಾಗಿ ಬರುತ್ತಿರುವಾಗ ಸ್ಕಿಡ್ ಆಗಿ ಕೆಳಗೆ ಬೀಳುತ್ತಿದ್ದಾರೆ. ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರು ಬೈಕ್ನಿಂದ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುಂಡಿ ಮುಚ್ಚುವ ಸಲುವಾಗಿ ರಸ್ತೆ ಮೇಲೆ ಜಲ್ಲಿ ಕಲ್ಲು ಹಾಕಲಾಗಿದೆ. ಜಲ್ಲಿ ಕಲ್ಲು ಮೇಲೆ ಬೈಕ್ ಬರುತ್ತಿದ್ದಂತೆ ಸ್ಕೀಡ್ ಆಗಿ ಸವಾರರು ರಸ್ತೆ ಮೇಲೆ ಬೀಳುತ್ತಿದ್ದಾರೆ. ಇನ್ನು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ಮತ್ತು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಏಳು ದಿನಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಮೂಲ್ಯ ಜೀವಗಳು ಹೋಗುವ ಮುನ್ನ ಸರಿಪಡಿಸಿ ಎಂದು ರಸ್ತೆಯ ಲೊಕೇಶ್ ಸಮೇತ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಜಲ್ಲಿ ಕಲ್ಲು ಹಾಕಿ ಹೋಗುತ್ತಿದೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿದ್ದಂತೆ ಗುಂಡಿಗಳಿಂದ ಜಲ್ಲಿ ಕಲ್ಲುಗಳು ಹೊರಗೆ ಬರುತ್ತವೆ. ರಸ್ತೆಯ ಮೇಲೆಲ್ಲ ಜಲ್ಲಿ ಕಲ್ಲು ಬಿದ್ದಿರುತ್ತವೆ. ಇದರಿಂದ ಬೈಕ್ ಸವಾರರು ತೊಂದರೆ ಅನುಭಸುತ್ತಿದ್ದಾರೆ ಎಂದು ವಾಹನ ಸಾವರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಬಸ್ ಅಡ್ಡಹಾಕಿ ಕಿಡಿಗೇಡಿಗಳ ಅಟ್ಟಹಾಸ: ಕೆಎಸ್ಆರ್ಟಿಸಿ ಬಸ್‌ಗಳ ಗಾಜು ಪುಡಿಪುಡಿ