ನೀತಿ ಸಂಹಿತೆ ಎಫೆಕ್ಟ್: ಪ್ರವಾಸಿಮಂದಿರಗಳು ಕ್ಲೋಸ್- ಸರ್ಕಾರಿ ಬ್ಯಾನರ್ಗಳ ತೆರವು - ETV Bharat kannada News
🎬 Watch Now: Feature Video
ಚಾಮರಾಜನಗರ : ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇಂದು ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿದ್ದ ಚುನಾವಣೆ ವೇಳಾಪಟ್ಟಿ ಪ್ರಕಟಿಸಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯಾದ್ಯಂತ ರಾಜಕೀಯ ಸಭೆ, ರಾಜಕೀಯ ಮುಖಂಡರ ವಾಸ್ತವ್ಯ, ಸಮಾರಂಭಗಳಿಗೆ ಪ್ರವಾಸಿ ಮಂದಿರದಲ್ಲಿ ನಿರ್ಬಂಧ ಹೇರಲಾಗಿದೆ. ಹಾಗೂ ಪ್ರವಾಸಿ ಮಂದಿರದ ಗೇಟ್ಗೆ ನೀತಿ ಸಂಹಿತೆ ಜಾರಿಯಾದ ಸಂಬಂಧ ಬೋರ್ಡ್ಗಳನ್ನು ಹಾಕಲಾಗಿದೆ. ಪ್ರವಾಸಿ ಮಂದಿರದಲ್ಲಿದ್ದ ಶಾಸಕರ ಕಚೇರಿ ತೆರವಾಗಿದ್ದು, ಅವರಿಗೆ ಸಂಬಂಧಿಸಿದ ವಸ್ತಗಳು, ಕಡತಗಳನ್ನು ಇಂದು ತೆಗೆದುಕೊಂಡು ಹೋಗಿದ್ದಾರೆ.
ಇನ್ನು, ರಾಜ್ಯದ ವಿಧಾನಸಭೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತದ ಆವರಣದಲ್ಲಿ ಅಳವಡಿಸಲಾಗಿದ್ದ ರಾಜಕೀಯ ಪಕ್ಷಗಳು, ಸರ್ಕಾರಿ ಯೋಜನೆಗಳ ಪ್ರಚಾರದ ಬ್ಯಾನರ್ ಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂತು. ಒಟ್ಟಿನಲ್ಲಿ ಇಂದಿನಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ರಾಜಕೀಯ ಚಟುವಟಿಕೆ ರಂಗೇರಲು ಆರಂಭವಾಗಿದೆ. ಎಲ್ಲ ರಾಕೀಯ ಪಕ್ಷಗಳು ನೀತಿ ಸಂಹಿತೆ ಪಾಲಿಸಬೇಕಿದೆ.
ಇದನ್ನೂ ಓದಿ : ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದೂ ನಡೆಯಲ್ಲ: ಬಿ ವೈ ವಿಜಯೇಂದ್ರ