ಮನೆಯ ಫ್ರಿಡ್ಜ್ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ನಾಗರಹಾವಿನ ರಕ್ಷಣೆ - ಈಟಿವಿ ಭಾರತ ಕನ್ನಡ
🎬 Watch Now: Feature Video
ತುಮಕೂರು : ಮನೆಯಲ್ಲಿನ ಫ್ರಿಡ್ಜ್ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ಸುಮಾರು ಆರು ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಲಾಗಿದೆ. ಇಲ್ಲಿನ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿನ ಫ್ರಿಡ್ಜ್ ಹಿಂಭಾಗದಲ್ಲಿ ನಾಗರ ಹಾವೊಂದು ಅಡಗಿ ಕುಳಿತಿತ್ತು.ಬಳಿಕ ಸ್ಥಳಕ್ಕಾಗಮಿಸಿದ ಉರಗ ತಜ್ಞ ಮಹಾಂತೇಶ್ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Last Updated : Feb 3, 2023, 8:32 PM IST