Watch.. ಗಂಗಾ ಆರತಿಯನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದ ಜಿ-20 ಪ್ರತಿನಿಧಿಗಳು - ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
🎬 Watch Now: Feature Video
ಉತ್ತರಾಖಂಡ : ಇಲ್ಲಿನ ನರೇಂದ್ರ ನಗರದಲ್ಲಿ ನಡೆದ ಮೂರು ದಿನಗಳ ಜಿ20 ಯ ಮೂರನೇ ಸಭೆ ಬುಧವಾರ ಮುಕ್ತಾಯಗೊಂಡಿದೆ. ಬುಧವಾರ ಸಂಜೆ G20 ಸಭೆಯಲ್ಲಿ ಭಾಗವಹಿಸಿದ್ದ ವಿದೇಶಿ ಅತಿಥಿಗಳು ಋಷಿಕೇಶದಲ್ಲಿ ಆಯೋಜಿಸಿದ್ದ ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಗಂಗಾ ಆರತಿಗೆ ಆಗಮಿಸಿದ್ದರು.
ಇದನ್ನೂ ಓದಿ : ಗಂಗಾ ನದಿ ಪ್ರವಾಹದಿಂದ ನಿಂತ ನೀರಿನಲ್ಲಿ ವೈಭವದ ಗಂಗಾ ಆರತಿ.. ವಿಡಿಯೋ
ಋಷಿಕೇಶದ ತ್ರಿವೇಣಿ ಘಾಟ್‌ನಲ್ಲಿ ಜಿ20ಯ ವಿದೇಶಿ ಪ್ರತಿನಿಧಿಗಳೊಂದಿಗೆ ಸಿಎಂ ಧಾಮಿ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ವಿದೇಶಿ ಪ್ರತಿನಿಧಿಗಳು ಗಂಗಾ ಆರತಿಯನ್ನು ಮಂತ್ರಮುಗ್ಧರಾಗಿ ವೀಕ್ಷಿಸುತ್ತಾ ಅದ್ಭುತ ಅನುಭವ ಪಡೆದರು. ಉತ್ತರಾಖಂಡಕ್ಕೆ ಮೂರು G20 ಸಭೆಗಳನ್ನು ಆಯೋಜಿಸುವ ಅವಕಾಶ ನೀಡಲಾಗಿತ್ತು. ಅದರಲ್ಲಿ ಮೊದಲ ಸಭೆ ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿ ನಡೆಸಲಾಯಿತು. ಬಳಿಕ, ಋಷಿಕೇಶ ಸಮೀಪದ ನರೇಂದ್ರ ನಗರದಲ್ಲಿ ಮತ್ತೇರಡು ಸಭೆಗಳು ನಡೆದವು. ಇಂದಿನಿಂದ G20 ಅತಿಥಿಗಳನ್ನು ಹಿಂದಿರುಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಇದನ್ನೂ ಓದಿ : ಭಾರೀ ಮಳೆಯ ನಡುವೆಯೂ ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ : ವಿಡಿಯೋ