ಶಿಗ್ಗಾವಿ 'ಕರ್ನಾಟಕ ಕುಸ್ತಿ ಹಬ್ಬ'ಕ್ಕೆ ತೆರೆ: ನಾನೂ ಸಹ ಕುಸ್ತಿ ಆಡಿಯೇ ಬೆಳೆದಿದ್ದೇನೆ ಎಂದ ಸಿಎಂ - ETV Bharat Karnataka
🎬 Watch Now: Feature Video
ಹಾವೇರಿ : ಶಿಗ್ಗಾವಿಯಲ್ಲಿ ಕರ್ನಾಟಕ ಕುಸ್ತಿ ಹಬ್ಬ 2022-23ಕ್ಕೆ ಭಾನುವಾರ ಅಧಿಕೃತ ತೆರೆ ಬಿತ್ತು. ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, "ನಾನು ಬಾಲ್ಯದಲ್ಲಿ ಗರಡಿ ಮನೆಗೆ ಹೋಗಿದ್ದೆ. ನಾನೂ ಸಹ ಕುಸ್ತಿ ಆಡಿಯೇ ಬೆಳೆದಿದ್ದೇನೆ. ಪಾರಂಪರಿಕ ಕುಸ್ತಿ ಹಾಗೂ ಆಧುನಿಕ ಕುಸ್ತಿ ನಡುವೆ ವ್ಯತ್ಯಾಸವಿದೆ. ಈ ಪಂದ್ಯಾವಳಿ ಐತಿಹಾಸಿಕವಾಗಿದೆ" ಎಂದು ಹೇಳಿದರು.
ಬಳಿಕ, "ಇದು ಹೆಚ್ಚು ಮಾತನಾಡುವ ಸಮಯವಲ್ಲ. ಇವತ್ತು ಫೈನಲ್ ಡೇ ಆದ್ದರಿಂದ ಪೈಲ್ವಾನರ ಕುಸ್ತಿ ನೋಡಿ ಆನಂದಿಸಬೇಕು" ಎಂದರು. ಇದೇ ವೇಳೆ, ಖುದ್ದು ಕುಸ್ತಿ ಕಣಕ್ಕಿಳಿದ ಸಿಎಂ ಕೈತಟ್ಟಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು. ಇದಕ್ಕೂ ಮುನ್ನ ಮೈದಾನಕ್ಕೆ ಪೂಜೆ ಮಾಡಿ ಕುಸ್ತಿಹಬ್ಬ ನೋಡಲು ಬಂದ ಅಭಿಮಾನಿಗಳತ್ತು ಕೈ ಬೀಸಿದರು.
ಕುಸ್ತಿ ಶುರುವಾಗುತ್ತಿದಂತೆ ಜಗಜಟ್ಟಿಗಳ ಕಾಳಗ ವೀಕ್ಷಿಸಿದರು. ದಾವಣಗೆರೆ ಹಾಗೂ ಬೆಳಗಾವಿ ಮೂಲದ ಪೈಲ್ವಾನರ ಕುಸ್ತಿ ಪಟ್ಟುಗಳನ್ನು ಆನಂದಿಸಿದರು. ಫೈನಲ್ ಪಂದ್ಯದಲ್ಲಿ ವಿಜೇತ ಕುಸ್ತಿಪಟುಗಳಿಗೆ ಪ್ರಶಸ್ತಿ ನೀಡಿದರು.
ಇದನ್ನೂ ಓದಿ: ಶಿಗ್ಗಾಂವಿ ಗ್ರಾಮ ದೇವತೆ ಆರ್ಶೀವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ: ಬಸವರಾಜ್ ಬೊಮ್ಮಾಯಿ